

ಪ್ರತಿವರ್ಷದಂತೆ ಈ ವರ್ಷವೂ ಬಾಲಿವುಡ್ ಸೆಲೆಬ್ರಿಟಿಗಳು ಶಿಕ್ಷಕರ ದಿನಾಚರಣೆಯಂದು ತಮ್ಮ ಶಿಕ್ಷಕರನ್ನು ನೆನಪಿಸಿಕೊಂಡು ಗೌರವ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್ ಅವರು ಕ್ಯಾಮರಾ ಕೃತಜ್ಞತೆ ಸಲ್ಲಿಸಿದ್ದಾರೆ. ಶಿಕ್ಷಕರ ದಿನದಂದು ನಾನು ಕ್ಯಾಮರಾಕ್ಕೆ ವಂದನೆ ಸಲ್ಲಿಸುತ್ತೇನೆ. ನಾನು ಇದರ ಹಿಂದೆ ಇದ್ದಾಗಲೆಲ್ಲ ಹೊಸದನ್ನು ಕಲಿತಿದ್ದೇನೆ. ಈಗಲೂ ಕಲಿಯುತ್ತೇದ್ದೇನೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
ಮನೋಜ್ ಬಾಜಪೇಯಿ ಅವರು ತಮಗೆ ಕಲಿಸಿದ ಎಲ್ಲ ಶಿಕ್ಷಕರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಅಕ್ಷರ, ಸಂಖ್ಯೆ, ಪಠ್ಯವನ್ನು ಕಲಿಸಿದ ಶಿಕ್ಷಕ ವೃಂದಕ್ಕಷ್ಟೇ ಅಲ್ಲ, ಈ ಭೂಮಿಯ ಮೇಲೆ ಪ್ರತಿಯೊಂದನ್ನೂ, ಪ್ರತಿಯೊಬ್ಬರನ್ನೂ ಪ್ರೀತಿಸಬೇಕು ಎಂಬ ಪಾಠ ಹೇಳಿಕೊಟ್ಟ ಗುರುವೃಂದಕ್ಕೆ ತಲೆಬಾಗಿ ನಮಿಸುತ್ತೇನೆ ಎಂದಿದ್ದಾರೆ.
ಹಾಗೇ, ಬಾಲಿವುಡ್ ನಟ ಸೋನು ಸೂದ್ ಅವರು ತಮ್ಮ ತಾಯಿಯೇ ಗುರು ಎಂದು ಹೇಳಿದ್ದಾರೆ. ತನ್ನ ತಾಯಿಯ ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿರುವ ಸೋನು ಸೂದ್, ಅಮ್ಮ, ನಾನು ನೀವು ತೋರಿಸಿಕೊಟ್ಟ ಸರಿಯಾದ ದಾರಿಯಲ್ಲೇ ನಡೆಯುತ್ತಿದ್ದೇನೆ. ಗಮ್ಯ ಇನ್ನೂ ದೂರವಿದೆ..ಆದರೆ ಖಂಡಿತ ಅಲ್ಲಿಗೆ ತಲುಪುತ್ತೇನೆ ಎಂದು ಬರೆದಿದ್ದಾರೆ.
ಕಂಗನಾ ರಾವತ್ ಕೂಡ ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಬಾಲ್ಯದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ನನ್ನ ಒಂದನೇ ತರಗತಿಯ ಫೋಟೋ. ನನ್ನ ಶಿಕ್ಷಕರಿಂದ ಗಿಫ್ಟ್ ಪಡೆಯುತ್ತಿರುವುದು. ನಾನು ನೇರವಾಗಿ ಹಾಗೂ ಪರೋಕ್ಷವಾಗಿ ಅನೇಕರಿಂದ, ಅನೇಕ ವಿಚಾರಗಳನ್ನು ಕಲಿತಿದ್ದೇನೆ. ಅವರಿಗೆಲ್ಲ ವಂದನೆಗಳು ಎಂದಿದ್ದಾರೆ.
ಶಿಲ್ಪಾ ಶೆಟ್ಟಿ ಸೇರಿ ಇನ್ನೂ ಹಲವು ಗಣ್ಯರು ತಮ್ಮ ಗುರುವೃಂದಕ್ಕೆ ವಂದನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)