More

    ಜಾಹ್ನವಿ ಡಯಟ್​ ಸೀಕ್ರೆಟ್​​ ರಿವೀಲ್​ ಮಾಡಿದ ತಂದೆ: ಮಗಳೊಂದಿಗೆ ರೆಸ್ಟೋರೆಂಟ್​​ಗೆ ಹೋಗೋದಂದ್ರೆ ತಲೆನೋವಂತೆ

    ಮುಂಬೈ: ಜಾಹ್ನವಿ ಕಪೂರ್​​ ತನ್ನ 13ನೇ ವಯಸ್ಸಿನಲ್ಲಿಯೇ ಡಯಟ್​ ಶುರು ಮಾಡಿದ್ದಾಳೆ ಎಂದು ​ಬಾಲಿವುಡ್​​ ನಿದೇರ್ಶಕ ಬೋನಿ ಕಪೂರ್ ಅವರು ಮಗಳ ಹೊಸ ಸಿನಿಮಾ ‘ಮಿಲಿ’ ಪ್ರಚಾರದ ವೇಳೆ ಆಕೆಯ ಆಹಾರದ​​ ಕಾಳಜಿಯ ಬಗ್ಗೆ ಹೇಳಿಕೊಂಡಿದ್ದಾರೆ.

    ಬೋನಿ ಕಪೂರ್​​ ತಮ್ಮ ಪತ್ನಿ ಶ್ರೀದೇವಿ ಮತ್ತು ಮಗಳು ಜಾಹ್ನವಿ ಕಪೂರ್​ನೊಂದಿಗೆ ರಜಾದಿನಗಳನ್ನು ಕಳೆಯಲು ನ್ಯೂಯಾರ್ಕ್​​ಗೆ ಹೋದ ಸಂದರ್ಭವನ್ನು ನೆನಪಿಸಿಕೊಂಡು, ಅಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ನ್ಯೂಯಾರ್ಕ್​ನ ರೆಸ್ಟೋರೆಂಟ್​ಗೆ ಹೋದಾಗ, ಜಾಹ್ನವಿ ಬೆಣ್ಣೆ ಹಾಕದೇ ಇರುವ ಗ್ರೀಲ್ಡ್​​ ಫಿಶ್​ ಅನ್ನು ಆರ್ಡರ್​​ ಮಾಡಿದ್ದಳು. ಅದನ್ನು ನೋಡಿ ನನಗೆ ಶಾಕ್​ ಆಯಿತು. ಯಾರಾದರೂ ಗ್ರೀಲ್ಡ್​​ ಫಿಶ್​ ಅನ್ನು ಬೆಣ್ಣೆ ಹಾಕದೇ ತಿನ್ನುತ್ತಾರಾ? ಎಂದು ನಾನು ಅವಳಿಗೆ ಬೈದಿದ್ದೆ ಎಂದು ಹೇಳುತ್ತಾ ಜಾಹ್ನವಿಯ ಡಯಟ್​ ಕಾಳಜಿಯ ಬಗ್ಗೆ ತಿಳಿಸಿದರು.

    ಜಾಹ್ನವಿ 13ನೇ ವಯಸ್ಸಿನಲ್ಲಿಯೇ ಡಯಟ್​ ಶುರು ಮಾಡಿದ್ದಳು. ದಪ್ಪ ಇದ್ದಾಗ ಅನೇಕರು ಅವಳನ್ನು ಟೀಕಿಸಿದ್ದರು. ಆ ಕಾರಣದಿಂದ ಜಾಹ್ನವಿ ಡಯಟ್​ ಶುರು ಮಾಡಿದ್ದಳು. ಅವಳೊಂದಿಗೆ ನನಗೆ ರೆಸ್ಟೋರೆಂಟ್​ಗೆ ಹೋಗೋದು ಅಂದ್ರೆ ತಲೆನೋವಾಗುತ್ತೆ. ಯಾಕಂದ್ರೆ ಜಾಹ್ನವಿ ಅವಳ ತಾಯಿಯಂತೆ ಕೇವಲ ಅವಳ ಡಯಟ್​ಗೆ ತಕ್ಕ ಫುಡ್​​ ಸಿಗುವ ರೆಸ್ಟೋರೆಂಟ್​​ಗೆ ಹೋಗ್ತಾಳೆ. ಇದಷ್ಟೇ ಅಲ್ಲ, ಭಾರತೀಯ ಶೈಲಿಯ ಊಟವೇ ಬೇಕು ಎಂಬ ಕಾರಣಕ್ಕೆ ಬೋನಿ ಕಪೂರ್​​ ತಮ್ಮ ಮನೆಯ ಅಡುಗೆಯವರನ್ನು ತಮ್ಮೊಂದಿಗೆ ವಿದೇಶ ಪ್ರವಾಸಕ್ಕೆ ಬರಲು ಕೇಳಿಕೊಂಡಿದ್ದರಂತೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts