ಮುಂಬೈ: ಸಿನಿ ಸೆಲೆಬ್ರಿಟಿಗಳು, ಕ್ರಿಕೆಟರ್ಸ್, ರಾಜಕೀಯ ಮುಖಂಡರ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಅದರಲ್ಲೂ ಸಿನಿಮಾ ಸ್ಟಾರ್ಗಳು ಇತ್ತೀಚಿನ ದಿನಗಳಲ್ಲಿ ತಮ್ಮ ದೈನಂದಿನ ಆಗುಹೋಗುಗಳು, ತಾವು ನಟಿಸುವ ಮುಂದಿನ ಸಿನಿಮಾಗಳು, ತಮ್ಮ ಅಭಿಮಾನಿಗಳೊಂದಿಗೆ ನೇರ ಮಾತುಕತೆ ನಡೆಸಲು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಈ ವಿಚಾರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸಹ ಹೊರತಾಗಿಲ್ಲ.
ಆ್ಯಂಗ್ರಿ ಯಂಗ್ ಮೆನ್ ಎಂದೇ ಖ್ಯಾತಿ ಗಳಿಸಿರುವ ಅಮಿತಾಭ್, ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್ ಮತ್ತು ಪಬ್ಲಿಕ್ ಅಪಿಯರೇನ್ಸ್ ಬಗೆಗಿನ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಪ್ರಪಂಚದಾದ್ಯಂತ ಇರುವ ಅವರ ಅಭಿಮಾನಿಗಳು ಅಮಿತಾಭ್ ಟ್ವೀಟ್ ಫಾಲೋ ಮಾಡುವುದಲ್ಲದೆ, ಅವರ ಟ್ವೀಟ್ಗೆ ಪ್ರತಿಕ್ರಿಯಿಸುತ್ತಿರುತ್ತಾರೆ.
ಅಮಿತಾಭ್ ಅವರು ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ತಮಗಿರುವ ಒಲವಿನ ಬಗ್ಗೆ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾವನ್ನು ನೋಡಲು ಪ್ರಾರಂಭಿಸಿದರೆ ಸಮಯ ಹೋಗುವುದೆ ತಿಳಿಯುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಅಭಿಮಾನಿಗಳೊಂದಿಗೆ ನಡೆಸುವ ನೇರ ಮಾತುಕತೆ ಹಾಗೂ ಹಲವು ವಿಷಯಗಳನ್ನು ತಿಳಿಯಲು ತಾವು ಹೇಗೆ ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.
ಒಮ್ಮೆ ನೀವು ಸಾಮಾಜಿಕ ಮಾಧ್ಯಮವನ್ನು ನೋಡಲು ಪ್ರಾರಂಭಿಸಿದರೆ, ನೀವು ಸಮಯವನ್ನು ಕಳೆದುಕೊಳ್ಳುತ್ತೀರಿ ಎಂದು ಅಮಿತಾಭ್ ಬಚ್ಚನ್ ತಮ್ಮ ಎಕ್ಸ್ (ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
T 5024 – social media एक बार देखना शुरू करो, तो समय का पता ही नहीं चलता
— Amitabh Bachchan (@SrBachchan) May 28, 2024
ಬಿಗ್ಬಿ ಟ್ವೀಟ್ಗೆ ಸಾಕಷ್ಟು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಖಂಡಿತವಾಗಿಯೂ ನಿಜ, ಸರ್! ಸಾಮಾಜಿಕ ಮಾಧ್ಯಮವು ಅದರ ಅಂತ್ಯವಿಲ್ಲದ ವಿಷಯದ ಮೂಲಕ ನಮ್ಮನ್ನು ಆಕರ್ಷಿಸುತ್ತದೆ. ನಮ್ಮ ಮಾತುಕತೆಯಲ್ಲಿ ನಿಮ್ಮ ಉಪಸ್ಥಿತಿಯು ಯಾವಾಗಲೂ ವಿಶೇಷವಾಗಿರುತ್ತದೆ. ನಾವು ನಿಮ್ಮ ತಿಳವಳಿಕೆ ಮತ್ತು ಬುದ್ಧಿವಂತಿಕೆ ಮಾತುಗಳನ್ನು ಕೇಳಲು ಕಾತುರದಿಂದ ಕಾಯುತ್ತಿರುತ್ತೇವೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. “ಸಾಹಿ ಬಾತ್ ಹೈ ಜಿ ಐಸೆ ಹೆ ಹೋತಾ ಹೈ,” ಎಂದು ಮತ್ತೊಬ್ಬ ಅಭಿಮಾನಿ ಹೇಳಿದ್ದಾರೆ.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಮಿತಾಭ್ ಬಚ್ಚನ್ ಅವರು ಕಲ್ಕಿ 2898 AD”ಯಲ್ಲಿ ಅಶ್ವತ್ಥಾಮನ ಪಾತ್ರ ಮತ್ತು ತಮಿಳಿನಲ್ಲಿ “ವೆಟ್ಟೈಯನ್” ಸಿನಿಮಾದಲ್ಲಿನ ತಮ್ಮ ಪಾತ್ರವು ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿವೆ. (ಏಜೆನ್ಸೀಸ್)
ಮದ್ವೆಯಾಗಿ 2 ವಾರ ಕಳೆದ್ರೂ ಮುಖ ತೋರಿಸದ ಪತ್ನಿ! ಕೊನೆಗೆ ನಿಜ ಸಂಗತಿ ತಿಳಿದು ಮೂರ್ಛೆ ಹೋದ ಯುವಕ
ನಾನು ಮೋಸ ಹೋಗಿದ್ದೇನೆ.. ಈ ವಿಚಾರದಲ್ಲಿ ಹುಷಾರಾಗಿರಿ; “ಕಾಟೇರ” ವಿಲನ್ ಜಗಪತಿ ಬಾಬು ಎಚ್ಚರಿಕೆ