ಬೆತ್ತಲಾಗಲಿದ್ದಾರೆ ನಟಿ ಶ್ರದ್ಧಾ ಕಪೂರ್!; ಬಾಲಿವುಡ್​ ಸುಂದರಿಯ ಶಾಕಿಂಗ್​ ಪ್ರಯೋಗ

Shraddha
Published on

ಸಕ್ರಿಯರಾಗಿದ್ದಾರೆ. ವಿಭಿನ್ನ ಪಾತ್ರಗಳನ್ನು ಆಯ್ದುಕೊಳ್ಳುವ ಮೂಲಕ ತಮ್ಮ ನಟನಾ ಪ್ರೌಢಿಮೆ ತೋರುತ್ತಿದ್ದಾರೆ. ಬಾಲಿವುಡ್​ ಜತೆಗೆ ದಕ್ಷಿಣ ಭಾರತದ ಸಿನಿಮಾರಂಗದಲ್ಲೂ ವ್ಯಾಪ್ತಿ ವಿಸ್ತರಿಸಿಕೊಂಡಿದ್ದಾರೆ. ಇದೀಗ ಇದೇ ನಟಿ ಬೆತ್ತಲಾಗಲಿದ್ದಾರಂತೆ!

ಅಚ್ಚರಿ ಅನಿಸಿದರೂ ನಿಜ ಎನ್ನುತ್ತಿವೆ ಬಾಲಿವುಡ್​ನ ಒಂದಷ್ಟು ಮೂಲಗಳು. ಈಗಾಗಲೇ ಬೊಲ್ಡ್​ ಪಾತ್ರಗಳ ಮೂಲಕ ಸಾಕಷ್ಟು ನಟಿಮಣಿಯರು ಗುರುತಿಸಿಕೊಂಡಿದ್ದಾರೆ. ಈಗ ಆ ಸಾಲಿಗೆ ಸೇರ್ಪಡೆಗೊಳ್ಳಲು ಶ್ರದ್ಧಾ ಕಪೂರ್ ಸಿದ್ಧರಾಗಿದ್ದಾರಂತೆ. ಅಂದರೆ, ಕಳೆದ ವರ್ಷ ತಮಿಳಿನಲ್ಲಿ ತೆರೆಕಂಡು ವಿಮರ್ಶೆ ದೃಷ್ಟಿಯಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದ್ದ, ‘ಆಡಾಯ್‘ ಚಿತ್ರವನ್ನು ಬಾಲಿವುಡ್​ಗೆ ರಿಮೇಕ್​ ಮಾಡುವ ಬಗ್ಗೆ ಮಾತುಕತೆ ನಡೆದಿದ್ದು, ಹಿಂದಿಯಲ್ಲಿ ಶ್ರದ್ಧಾ ಕಪೂರ್ ಈ ಸಿನಿಮಾ ಮಾಡುವ ಸಾಧ್ಯತೆ ಇದೆ.

ರತ್ನ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರವನ್ನು ವಿಜಿ ನಿರ್ದೇಶನ ಮಾಡಿದ್ದರು. ತಮಿಳು ಮತ್ತು ತೆಲುಗಿನಲ್ಲಿ ಸಿಕ್ಕ ಪ್ರತಿಕ್ರಿಯೆ ಕಂಡು, ಇದೇ ಜೋಡಿ ಬಾಲಿವುಡ್​ನಲ್ಲಿ ಸಿನಿಮಾ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮೂಲ ಸಿನಿಮಾದಲ್ಲಿ ಅಮಲಾ ಪೌಲ್​ ಬೋಲ್ಡ್ ರೋಲ್​ ನಿಭಾಯಿಸಿದ್ದರು. ಚಿತ್ರಕ್ಕಾಗಿ ಬೆತ್ತಲಾಗಿದ್ದರು. ಇದೀಗ ಆ ಚಿತ್ರದ ಹಿಂದಿ ರಿಮೇಕ್​ನಲ್ಲಿ ನಟಿಸಲು ಶ್ರದ್ಧಾ ಅವರನ್ನು ಚಿತ್ರತಂಡ ಭೇಟಿ ಮಾಡಿದೆ. ಕಥೆ ಕೇಳಿ ಶ್ರದ್ಧಾ ಕಡೆಯಿಂದಲೂ ಒಂದು ಹಂತದ ಸಮ್ಮತಿ ಸಿಕ್ಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net