ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ರೀತಿಯ ಚಾಲೆಂಜ್ಗಳನ್ನು ನೋಡಿದ್ದೇವೆ. ಕೀಕಿ ಚಾಲೆಂಜ್, ನೋ ಮೇಕಪ್ ಚಾಲೆಂಜ್ ಹೀಗೆ ಅನೇಕ ರೀತಿಯ ಚಾಲೆಂಜ್ಗಳು ಜಾಲತಾಣಗಳಲ್ಲಿ ಸದ್ದು ಮಾಡಿ ಹೋಗಿವೆ. ಇದೀಗ ಫ್ಲಿಪ್ ದಿ ಸ್ವಿಚ್ ಚಾಲೆಂಜ್ ಟ್ರೆಂಡಿಂಗ್ನಲ್ಲಿದ್ದು, ಅನೇಕ ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿ ಹೆಜ್ಜೆ ಹಾಕುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ.
ವಿಶೇಷವೆನಿಸುವಂತೆ ಬಾಲಿವುಡ್ನ ನಟಿ ಸಮೀರಾ ರೆಡ್ಡಿ ತನ್ನ ಅತ್ತೆಯ ಜತೆ ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಚಾಲೆಂಜ್ ಸ್ವೀಕರಿಸಿರುವ ವಿಡಿಯೋವನ್ನು ಹಾಕಿದ್ದಾರೆ.
ವಿಡಿಯೋ ಪೋಸ್ಟ್ ಮಾಡುವುದಕ್ಕೂ ಮೊದಲು ನಟಿ ಒಂದು ಫೋಟೋ ಹಾಕಿದ್ದು, ಅದರಲ್ಲಿ ಆಕೆ ಬಿಳಿ ಬಣ್ಣದ ಬಾತುಕೋಳಿಗಳ ಚಿತ್ರವಿರುವ ನೀಲಿ ಬಣ್ಣದ ಫ್ರಾಕ್ ಧರಿಸಿದ್ದಾರೆ. ಫೋಟೋದಲ್ಲಿ ಸಖತ್ ಸ್ಟೈಲಿಷ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಸಮೀರಾ ಅವರ ಅತ್ತೆ ಕಪ್ಪು ಬಣ್ಣದ ಶೋಲ್ಡರ್ಲೆಸ್ ಟಾಪ್ ಧರಿಸಿದ್ದು ಅದರ ಮೇಲೆ ಗ್ಯಾಂಗ್ಸ್ಟಾ ಎನ್ನುವ ಡಾಲರ್ ಇರುವ ಚೈನ್ ಧರಿಸಿದ್ದಾರೆ.
ಚಾಲೆಂಜ್ ಸ್ವೀಕರಿಸಿರುವ ವಿಡಿಯೋದಲ್ಲಿ ನಟಿ ಡ್ರೇಕ್ನ ಫ್ಲಿಪ್ ದಿ ಸ್ವಿಚ್ ಹಾಡಿಗೆ ಮೊದಲು ನೃತ್ಯ ಮಾಡಿದ್ದಾರೆ. ಕಪ್ಪು ಬಣ್ಣದ ಪ್ಯಾಂಟ್ ಮತ್ತು ಟಾಪ್ನ ಮೇಲೆ ಗ್ಯಾಂಗ್ಸ್ಟಾ ಡಾಲರ್ ಚೈನ್ ಧರಿಸಿ ನೃತ್ಯ ಮಾಡುತ್ತಿರುವ ನಟಿಯನ್ನು ಆಕೆಯ ಅತ್ತೆ ವಿಡಿಯೋ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲೇ ಇಬ್ಬರ ಬಟ್ಟೆಯು ಅದಲು ಬದಲಾಗಿದ್ದು, ನಟಿಯ ಅತ್ತೆ ಡ್ಯಾನ್ಸ್ ಮಾಡುವುದನ್ನು ನಟಿ ವಿಡಿಯೋ ಮಾಡಿದ್ದಾರೆ.
ಸಮೀರಾ ಮತ್ತು ಆಕೆಯ ಅತ್ತೆಯ ಈ ಡ್ಯಾನ್ಸ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಿಂದೆ ಟಾಲಿವುಡ್ನ ಜೆನ್ನಿಫರ್ ಲೋಪೆಜ್ ಮತ್ತು ಕ್ಯಾಮಿಲಾ ಕ್ಯಾಬೆಲ್ಲೊ ಕೂಡ ಈ ಚಾಲೆಂಜ್ಗೆ ಹೆಜ್ಜೆ ಹಾಕಿದ್ದು ಟಿಕ್ಟಾಕ್ನಲ್ಲಿ ವೈರಲ್ ಆಗಿತ್ತು. (ಏಜೆನ್ಸೀಸ್)
https://www.instagram.com/p/B9jHMDMHwl9/?utm_source=ig_web_button_share_sheet
ಈಗ ಎಲ್ಲೆಲ್ಲೂ ನಮಸ್ತೆ ಹವಾ! ಕರೊನಾ ಭಯಕ್ಕೆ ಭಾರತವನ್ನು ಅನುಕರಣೆ ಮಾಡಲಾರಂಭಿಸಿದ ವಿದೇಶಿಗರು