More

    ಈಗ ಎಲ್ಲೆಲ್ಲೂ ನಮಸ್ತೆ ಹವಾ! ಕರೊನಾ ಭಯಕ್ಕೆ ಭಾರತವನ್ನು ಅನುಕರಣೆ ಮಾಡಲಾರಂಭಿಸಿದ ವಿದೇಶಿಗರು

    ನವದೆಹಲಿ: ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್​ ಪ್ರಪಂಚದಾದ್ಯಂತ ಹರಡುತ್ತಿದೆ. ಕರೊನಾ ಬಗ್ಗೆ ಭಯಭೀತರಾಗಿರುವ ಜನರು ಬೇರೆಯವರೊಂದಿಗೆ ಹ್ಯಾಂಡ್​ ಶೇಕ್​ ಮಾಡುವುದಕ್ಕೂ ಯೋಚಿಸುವಂತಾಗಿದೆ. ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಹ್ಯಾಂಡ್​ ಶೇಕ್​ ಬದಲಾಗಿ ನಮಸ್ತೆ ಎಂದು ವಿಷ್​ ಮಾಡುವ ಟ್ರೆಂಡ್​ ಆರಂಭವಾಗಿದೆ.

    ದೇಶಕ್ಕೆ ಕರೊನಾ ವೈರಸ್​ ಬಂದಿರುವ ಹಿನ್ನೆಲೆ ಯಾರೂ ಹ್ಯಾಂಡ್​ ಶೇಕ್​ ಮಾಡಬೇಡಿ. ಬದಲಾಗಿ ನಮಸ್ತೆ ಎಂದು ವಿಷ್​ ಮಾಡಿ ಎಂದು ಕೆಲ ದಿನಗಳ ಹಿಂದೆ ಬಾಲಿವುಡ್​ನ ಹಿರಿಯ ನಟ ಅನುಪಮ್​ ಖೇರ್​ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈಗ ದೇಶಿಗರು ಮಾತ್ರವಲ್ಲದೆ ವಿದೇಶಿಯರೂ ಕೂಡ ನಮಸ್ತೆ ಎಂದು ನಮಸ್ಕರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿವೆ. ಪ್ರವೀಣ ಕಸ್ವಾನ್​ ಎನ್ನುವವರು ಟ್ವಿಟ್ಟರ್​ನಲ್ಲಿ ಒಂದು ವಿಡಿಯೋ ಶೇರ್​ ಮಾಡಿದ್ದು, ಅದರಲ್ಲಿ ವಿದೇಶಿಗರು ಹ್ಯಾಂಡ್​ ಶೇಕ್​ ಬದಲಾಗಿ ನಮಸ್ತೆ ಮಾಡುತ್ತಿರುವುದು ಸೆರೆಯಾಗಿದೆ.

    ಇಸ್ರೇಲ್​ನಲ್ಲಿಯೂ ಸಹ ಕರೊನಾ ವೈರಸ್​ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಇಸ್ರೇಲ್​ನ ಜನರು ಹ್ಯಾಂಡ್​ ಶೇಕ್​ನ ಬದಲು ನಮಸ್ತೆ ಹೇಳಬೇಕು ಎಂದು ಅಲ್ಲಿನ ಪ್ರಧಾನಿ ಬೆಂಜಮಿನ್​ ನೆತನ್ಯಾಹೂ ಸೂಚಿಸಿದ್ದಾರೆ.

    ಅದಷ್ಟೇ ಅಲ್ಲದೆ ಬಾಲಿವುಡ್​ನ ಅನೇಕ ಸ್ಟಾರ್​ಗಳು ಕರೊನಾ ಮುಗಿಯುವವರೆಗೂ ಹ್ಯಾಂಡ್​ ಶೇಕ್​ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಸಲ್ಮಾನ್​ ಖಾನ್​ ಕೂಡ ಈ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಾವು ಕೈ ಮುಗಿದು ಕುಳಿತಿರುವ ಫೋಟೋವೊಂದನ್ನು ಹಾಕಿ ಕರೊನಾ ವೈರಸ್​ ಹೋಗುವ ತನಕ, ಅಪ್ಪುಗೆ, ಹ್ಯಾಂಡ್​ ಶೇಕ್​ ಬದಲು ಮಾಡುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಕಾಲರ್​ ಟ್ಯೂನ್​ನಿಂದ ತಪ್ಪಿಸಿಕೊಳ್ಳೋದಕ್ಕೆ ಹೀಗೆ ಮಾಡಿ…

    ಮಹಿಳಾ ಟಿ20 ವಿಶ್ವಕಪ್​ ಪಂದ್ಯದಲ್ಲಿತ್ತು ಕರೊನಾ ವೈರಸ್​: ಐಪಿಎಲ್​ಗೂ ಬೀಳಬಹುದು ಹೊಡೆತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts