ಸಮಾಧಿ ಪಕ್ಕ ಮನೆ ಮಾಡಿ ದೆವ್ವದ ಕಾಟಕ್ಕೆ ನಾಲ್ಕೇ ದಿನಗಳಲ್ಲಿ ಖಾಲಿ ಮಾಡಿದ ಖ್ಯಾತ ನಟಿ!

Nargis Fakhri (16)
Published on

ಅಮೆರಿಕಾ ಮೂಲದ ನರ್ಗಿಸ್​ ಫಾಖ್ರಿ 2011ರ "ರಾಕ್​ಸ್ಟಾರ್​' ಚಿತ್ರದ ಮೂಲಕ ಬಾಲಿವುಡ್​ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಆದರೆ, ಅವರು ಹೆಚ್ಚು ಮಿಂಚಿದ್ದು ಸ್ಪೆಷಲ್​ ಸಾಂಗ್​ಗಳಲ್ಲಿ. ಡಜನ್​ಗೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು, ಇದೀಗ ಒಟಿಟಿ ಡೆಬ್ಯೂ ಮಾಡಲು ರೆಡಿಯಾಗಿದ್ದಾರೆ. "ಟಟ್ಲುಬಾಜ್​' ಎಂಬ ಹಾರರ್​ ವೆಬ್​ಸರಣಿಯಲ್ಲಿ ನರ್ಗಿಸ್​ ನಾಯಕಿಯಾಗಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

ವೆಬ್​ಸರಣಿ ಕುರಿತು ಮಾತನಾಡುತ್ತಾ ಅವರು, ತಮಗೆ ನಿಜಜೀವನದಲ್ಲಿ ಆದ ಕೆಲ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ಮುಂಬೈಗೆ ಬಂದ ಹೊಸತರಲ್ಲಿ ಸಮಾಧಿ ಪಕ್ಕದಲ್ಲಿದ್ದ ಒಂದು ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದೆ. ಪ್ರತಿದಿನ ಮುಂಜಾನೆ 3 ಗಂಟೆಗೆ ಕೆಟ್ಟ ಕನಸ್ಸುಗಳು ಬಂದು, ಎಚ್ಚರವಾಗಿಬಿಡುತ್ತಿತ್ತು. ಈಗಲೂ ಆ ಕನಸು ನೆನಪಿದೆ. ಆರೂವರೆ ಅಡಿ ಎತ್ತರದ ದೆವ್ವದಂದೆ ಕಾಣುವ ವ್ಯಕ್ತಿಯೊಬ್ಬ ನನ್ನನ್ನು ಸಮಾಧಿ ಬಳಿ ಕರೆದೊಯ್ಯುತ್ತಿದ್ದ. ನಂತರ ಬರಿಗೈಯಲ್ಲೇ ಸಮಾಧಿ ಮಣ್ಣು ಸರಿಸಿ ಶವಗಳ ಮೂಳೆ, ಮಾಂಸ ಕಿತ್ತು ತಾನೂ ತಿನ್ನುತ್ತಾ, ನನಗೂ ತಿನ್ನುವಂತೆ ಕೊಡುತ್ತಿದ್ದ. ಹೀಗಾಗಿ ನಾಲ್ಕೇ ದಿನಗಳಲ್ಲಿ ಆ ಫ್ಲ್ಯಾಟ್​​ ಖಾಲಿ ಮಾಡಿಬಿಟ್ಟೆ' ಎಂದು ಹೇಳಿಕೊಂಡಿದ್ದಾರೆ ನರ್ಗಿಸ್​.

"ಟಟ್ಲುಬಾಜ್​' ವೆಬ್​ಸರಣಿ ಜತೆಗೆ ನರ್ಗಿಸ್​ ತೆಲುಗಿನಲ್ಲಿ ಪವನ್​ ಕಲ್ಯಾಣ್​ ನಾಯನಾಗಿರುವ "ಹರಿಹರ ವೀರ ಮಲ್ಲು' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net