ವಾಯುಪಡೆಗೆ ಹೆಚ್ಚಿನ ಬಲ ತುಂಬಲು ಬಂದವು ಬೋಯಿಂಗ್​ನ ಅಪಾಚೆ ಹೆಲಿಕಾಪ್ಟರ್​

apache helicopter
Published on

ನವದೆಹಲಿ: ಚೀನಾದೊಂದಿಗಿನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮನೆ ಮಾಡಿರುವಂತೆ ಅಮೆರಿಕದ ಏರೋಸ್ಪೇಸ್​ ಕಂಪನಿ ಬೋಯಿಂಗ್​ ಭಾರತಕ್ಕೆ 5 ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ಗಳನ್ನು ಸರಬರಾಜು ಮಾಡಿದೆ. ಇದು ಭಾರತ ಖರೀದಿಸಲು ಬಯಸಿದ್ದ 22 ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ನ ಕೊನೆಯ ಕಂತಾಗಿದೆ.

ಈ ರೀತಿಯಾಗಿ ಬೋಯಿಂಗ್​ ಸಂಸ್ಥೆ ಭಾರತೀಯ ವಾಯುಪಡೆಗೆ ಎಲ್ಲ 22 ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ ಮತ್ತು 15 ಚಿನೋಕ್​ ಮಿಲಿಟರಿ ಹೆಲಿಕಾಪ್ಟರ್​ಗಳನ್ನು ಪೂರೈಕೆ ಮಾಡಿದಂತಾಗಿದೆ.

ಎಎಚ್​-64ಇ ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ ವಿಶ್ವದಲ್ಲಿ ಸದ್ಯ ಲಭ್ಯ ಇರುವ ಅತ್ಯಾಧುನಿಕ ಬಹುಮುಖೀಯ ದಾಳಿಯಲ್ಲಿ ಬಳಸಬಹುದಾದ ಕಾಂಬ್ಯಾಟ್​​ ಹೆಲಿಕಾಪ್ಟರ್​ ಆಗಿದೆ. ಚಿನಾಕ್​ ಮಿಲಿಟರಿ ಹೆಲಿಕಾಪ್ಟರ್​ ಕೂಡ ಬಹುಮುಖೀಯ, ಲಂಬಾಕಾರವಾಗಿ ಉಡಾವಣೆಗೊಳ್ಳುವ, ಯೋಧರನ್ನು, ಶಸ್ತ್ರಾಸ್ತ್ರಗಳು, ಇಂಧನವನ್ನು ರಣಾಂಗಣಕ್ಕೆ ಸಾಗಿಸುವ ಹೆಲಿಕಾಪ್ಟರ್​ ಆಗಿದೆ.

2015ರ ಸೆಪ್ಟೆಂಬರ್​ನಲ್ಲಿ ಭಾರತೀಯ ವಾಯುಪಡೆಗಾಗಿ 22 ಅಪಾಚೆ ಮತ್ತು 15 ಚಿನೋಕ್​ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಸರ್ಕಾರ ಬೋಯಿಂಗ್​ನೊಂದಿಗೆ ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net