

ಪಡುಬಿದ್ರಿ: ಕಾಪು ವೀರಭದ್ರೇಶ್ವರ ದೇವಸ್ಥಾನ ಹಿಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿ ಕ್ಯಾಬಿನ್ನಲ್ಲಿ ಸೋಮವಾರ ಮೃತದೇಹವೊಂದು ಪತ್ತೆಯಾಗಿದ್ದು, ಕಾಪು ಪಡುಗ್ರಾಮದ ಮಂಜುನಾಥ(55) ಮೃತಪಟ್ಟವರು. ಮಂಜುನಾಥ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಮಂಗಳೂರಿನ ವೆನ್ಲಾಕ್ನಲ್ಲಿ ಇದಕ್ಕೆ ಚಿಕಿತ್ಸೆ ಪಡೆದಿದ್ದರು. ಬಳಿಕ ಸರಿಯಾಗಿ ಔಷಧವನ್ನೂ ಸೇವಿಸುತ್ತಿರಲಿಲ್ಲ. ಇದರಿಂದ ಕಾಯಿಲೆ ಉಲ್ಬಣಗೊಂಡಿದ್ದು, ವಿಪರೀತ ಮದ್ಯ ಸೇವಿಸುತ್ತಿದ್ದರೆಂದು ತಿಳಿದುಬಂದಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.