ವೈರಲ್ ಆಗುತ್ತಿದೆ ಅನಿಮಲ್​ ಚಿತ್ರದ ಜಮಾಲ್​ ಕುಡು; ಇದರ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಬಾಬಿ ಡಿಯೋಲ್

Bobby Deol
Published on

ಮುಂಬೈ: ಬಾಲಿವುಡ್​ ನಟ ರಣಬೀರ್​ ಕಪೂರ್​ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್​​ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕೋಟ್ಯಂತರ ರೂಪಾಯಿ ಬಾಚುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಡಿಸೆಂಬರ್ 01ರಂದು ಬಿಡುಗಡೆಯಾದ ಈ ಚಿತ್ರವು 650 ಕೋಟಿಗೂ ಅಧಿಕ ಕಮಾಯಿ ಮಾಡಿದ್ದು, ಹೊಸ ದಾಖಲೆಯತ್ತ ದಾಪುಗಾಲಿರಿಸಿದೆ.

ಡಿಸೆಂಬರ್​ 01ರಂದು ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ದೊರೆತ್ತಿದ್ದು, ಹಲವೆಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇತ್ತ ಅನಿಮಲ್​ ಚಿತ್ರವನ್ನು ಹಲವಾರು ಮಂದಿ ಹಾಡಿ ಹೊಗಳಿದರೆ ಕೆಲವರು ಇದನ್ನು ಡಿಸಾಸ್ಟರ್​ ಎಂದು ತೆಗಳಿದ್ದಾರೆ. ಅನಿಮಲ್​ ಚಿತ್ರದ ಅಬ್ರಾರ್​ ಹಕ್ (ಬಾಬಿ ಡಿಯೋಲ್)​ ಪಾತ್ರವು ವೀಕ್ಷಕರ ಗಮನ ಸೆಳೆದಿದ್ದು, ಈ ಪಾತ್ರದ ಇಂಟ್ರಡಕ್ಷನ್‌ಗೆ ಬಳಸಿದ ಹಾಡು ಎಲ್ಲೆಡೆ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಜಮಾಲ್​ ಕುಡು ಎನ್ನುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದ್ದು, ಈ ಹಾಡನ್ನು ಎಲ್ಲರೂ ಎಂಜಾಯ್​ ಮಾಡುತ್ತಿದ್ದಾರೆ. ಗ್ಲಾಸ್ ಅನ್ನು ತಲೆ ಮೇಲೆ ಇಟ್ಟುಕೊಂಡು ಮಾಡಿರೋ ಡ್ಯಾನ್ಸ್ ಸ್ಟೆಪ್ ಎಲ್ಲರ ಫೇವರಿಟ್ ಆಗಿದೆ. ಇದರ ಮಧ್ಯೆ ಸ್ವತಃ ಬಾಬಿ ಡಿಯೋಲ್ ಈ ಹಾಡಿನ ಹಿಂದಿನ ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಜಮಾಲ್ ಕುಡು ಒಂದು ವಿಭಿನ್ನವಾದ ಹಾಡಾಗಿದೆ. ಇದನ್ನ ಮಾಡೋವಾಗ ವಿಶೇಷ ಫೀಲ್ ಇತ್ತು. ಆದರೆ ತಲೆ ಮೇಲೆ ಗ್ಲಾಸ್ ಇಟ್ಟುಕೊಂಡು ಡ್ಯಾನ್ಸ್ ಮಾಡುವ ಐಡಿಯಾ ಏನೂ ಇರಲಿಲ್ಲ. ಕೋರಿಯೋಗ್ರಾಫರ್ ಹೇಳಿದಂತೆ ಡ್ಯಾನ್ಸ್ ಮಾಡ್ತಾನೇ ಇದ್ದೆ. ಆದರೆ ಅದ್ಯಾಕೋ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅದನ್ನು ಒಪ್ಪದೇ ಬೇರೊಂದು ಸ್ಟೆಪ್​ ಮಾಡುವಂತೆ ಹೇಳಿದ್ದರು.

ಸಹನಟ ಹೇಳಿಕೊಟ್ಟಿದ್ದು

ನನ್ನ ಸಹೋದರನ ಪಾತ್ರಧಾರಿ (ಸೌರಭ್​ ಸಚ್​ದೇವ)ಗೆ ಕೇಳಿದೆ. ಈ ಹಾಡಿಗೆ ಒಮ್ಮೆ ಡ್ಯಾನ್ಸ್ ಮಾಡಿ ತೋರಿಸು ಅಂತಲೇ ಹೇಳಿದೆ. ಅವರು ಒಂದು ಸ್ಟೆಪ್​ ತೋರಿಸಿದರು. ಅದನ್ನೇ ನಿರ್ದೇಶಕರ ಮುಂದೆ ಮಾಡಿದೆ. ಅದನ್ನ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಮೆಚ್ಚಿಕೊಂಡ್ರು. ಅದನ್ನ ಜನ ಈಗ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಸಂದೀಪ್ ಈ ಹಾಡಿನ ಚಿತ್ರೀಕರಣ ಮುಂಚೆ ಇನ್ನೂ ಒಂದು ಮಾತು ಹೇಳಿದ್ದರು. ನಾನು ಒಂದು ಹಾಡು ಪ್ಲೇ ಮಾಡುತ್ತೇನೆ. ಅದಕ್ಕೆ ನೀವು ಡ್ಯಾನ್ಸ್ ಮಾಡಿ ಅಂತಲೇ ಹೇಳಿದ್ದರು. ಆ ಒಂದು ಜಮಾಲ್ ಕುಡು ಹಾಡು ಕೇಳಿದಾಗ ಇಷ್ಟ ಆಯಿತು. ಅದಕ್ಕೇನೆ ನಾನು ನನ್ನ ಸ್ಪೆಪ್ಸ್ ಸೇರಿಸಿ ಡ್ಯಾನ್ಸ್ ಮಾಡಿದ್ದೇನೆ. ಜೊತೆಗೆ ಸಂದೀಪ್ ರೆಡ್ಡಿಗೆ ಸಂಗೀತದ ಸೆನ್ಸ್ ತುಂಬಾ ಚೆನ್ನಾಗಿಯೇ ಇದೆ. ಐ ಲೈಕ್ಡ್​ ಇಟ್​ ಎಂದು ಬಾಬಿ ಡಿಯೋಲ್​ ಹೇಳಿದ್ದಾರೆ.

ಅನಿಮಲ್​ ಚಿತ್ರದಲ್ಲಿನ ಜಮಾಲ್​ ಕುಡು ಹಾಡು ಸಖತ್​ ವೈರಲ್​ ಆಗಿದ್ದು, ಬಾಬಿ ಡಿಯೋಲ್​ ಎಂಟ್ರಿಗೆ ಈ ಹಾಡನ್ನು ಕೇಳಬಹುದಾಗಿದೆ. ಆದರೆ ಇದಕ್ಕೆ ಅಬ್ರಾರ್ ಪಾತ್ರಧಾರಿ ಬಾಬಿ ಡಿಯೋಲ್ ಹಾಕಿರೋ ಸ್ಟೆಪ್ ಮಜಾವಾಗಿಯೇ ಇದೆ. ಇದನ್ನ ನೋಡಿದ ಜನ ಕೂಡ ಹೆಚ್ಚು ಇಷ್ಟಪಡುತ್ತಿದ್ದಾರೆ. ರೀಲ್ಸ್‌ನಲ್ಲಿ ಇದನ್ನೇ ಇಮಿಟೇಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net