More

    ಟಿಪ್ಪು ಸುಲ್ತಾನ್ ನಮ್ಮವರೇ ಅವರೇನು ಬೇರೆ ದೇಶದವರಾ: ಎಚ್.ಸಿ. ಮಹದೇವಪ್ಪ

    ಮೈಸೂರು: ಟಿಪ್ಪು ಸುಲ್ತಾನ್​ ನಮ್ಮವರೇ ಅವರೇನು ಬೇರೆ ದೇಶದವರಾ ಮೈಸೂರು ವಿಮಾನ ನಿಲ್ದಾಣಲ್ಲೆ ಅವರ​ ಹೆಸರಿಡುವಂತೆ ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಚಾರವಾಗಿ ಟಿಪ್ಪುರನ್ನು ದೇಶದ್ರೋಹಿಯಂತೆ ಬಿಂಬಿಸುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಮಾತನಾಡಿದ ಸಚಿವ ಎಚ್.ಸಿ. ಮಹದೇವಪ್ಪ, ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದು, ಬಿಡುವುಡು ಬೇರೆ ವಿಚಾರ. ಆದರೆ. ಅವರನ್ನು ದೇಶದ್ರೋಹಿಯಂತೆ ಬಿಂಬಿಸುವುದು ಸರಿಯಲ್ಲ ಎಂದಿದ್ದಾರೆ.

    ಭೂ ಸುಧಾರಣೆ ಕಾಯ್ದೆ, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿದ್ದು ಟಿಪ್ಪು ಅಲ್ಲವೇ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ನಮ್ಮ ತಕಾರರಿಲ್ಲ. ಟಿಪ್ಪು ಹೆಸರಿಡುವಂತೆ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ. ಅದನ್ನು ತಿರಸ್ಕರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

    ಟಿಪ್ಪು ಸುಲ್ತಾನ್ ನಮ್ಮವರೇ ಅವರೇನು ಬೇರೆ ದೇಶದವರಾ: ಎಚ್.ಸಿ. ಮಹದೇವಪ್ಪ

    ಇದನ್ನೂ ಓದಿ: ಕಲಾಪದ ವೇಳೆ ಅಶಿಸ್ತಿನ ವರ್ತನೆ; ವಿರೋಧ ಪಕ್ಷದ 30 ಸಂಸದರು ಅಮಾನತು

    ಸಂಸತ್​ ಅಧಿವೇಶನದ ವೇಳೆ ಭದ್ರತಾ ಲೋಪದ ಕುರಿತು ಪ್ರತಿಕ್ರಿಯಿಸಿ ಲೋಕಸಭೆಯಲ್ಲಿ ನಡೆದಿರುವುದು ಗಂಭೀರ ವಿಚಾರವಾಗಿದ್ದು, ರಾಷ್ಟ್ರೀಯ ಭದ್ರತೆಯ ದ್ದಾಗಿದೆ. ಒಂದು ವೇಳೆ ಬಂಧಿತ ಆರೋಪಿಗಳಿಗೆ ಬೇರೆಯವರು ಪಾಸ್ ಕೊಡಿಸಿದ್ದರೆ ಮೈಸೂರಿನ ಗತಿ ಏನಾಗುತ್ತಿತ್ತು, ಬೇರೆ ಧರ್ಮದವರು ನೀಡಿದ್ದರೆ ಗತಿ ಏನಾಗುತ್ತಿತ್ತು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

    ಬಿಜೆಪಿ ಸಂಸದ ಪ್ರತಾಪ ಸಿಂಹ ಪಾಸ್ ಕೊಡಿಸಿದ್ದರೆಂಬ ಕಾರಣಕ್ಕೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಗಡಿಪಾರಾದವರು, ಕೊಲೆ ಆರೋಪಿಗಳು ನಮ್ಮ ಜೊತೆಯೇ ಫೋಟೊ ತೆಗೆಸಿಕೊಂಡಿರುತ್ತಾರೆ. ಅದನ್ನು ನಾವು ಗಮನಿಸಲು ಆಗುತ್ತದೆಯೇ. ಪಾಸ್ ವಿಚಾರವೂ ಅದೇ ರೀತಿಯದ್ದಷ್ಟೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts