ತಲೆಹೊರೆ ಕಾರ್ಮಿಕರ ಹಿತಕ್ಕೆ ಧಕ್ಕೆ ಸಲ್ಲ : ಧೋರಣೆ ಕೈಬಿಡಲು ಸರ್ಕಾರಕ್ಕೆ ಬಿಎಂಎಸ್ ಆಗ್ರಹ

New Project (14)
Published on

ಕಾಸರಗೋಡು: ತಲೆಹೊರೆ ಕಾರ್ಮಿಕರ ಹಿತಕ್ಕೆ ಧಕ್ಕೆಯಾಗುವ ಧೋರಣೆ ಕೈಗೊಳ್ಳುತ್ತಿರುವ ಎಡರಂಗ ಸರ್ಕಾರ ಧೋರಣೆ ಕೈಬಿಡದಿದ್ದಲ್ಲಿ ಬಿಎಂಎಸ್ ಸಂಟಿತ ಹೋರಾಟದನ್ನೆ ಮುಂದಾಗುವುದಾಗಿ ಬಿಎಂಎಸ್ ರಾಜ್ಯ ಸಮಿತಿ ಕೋಶಾಧಿಕಾರಿ ಸಿ.ಬಾಲಚಂದ್ರನ್ ತಿಳಿಸಿದ್ದಾರೆ.

ಬಿಎಂಎಸ್ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ತಲೆಹೊರೆ ಕಾರ್ಮಿಕರು ಮತ್ತು ಜನರಲ್ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ತಲೆಹೊರೆ ಕಾರ್ಮಿಕರು ಮತ್ತು ಜನರಲ್ ಮಜ್ದೂರ್ ಸಂಘ್ ಜಿಲ್ಲಾಧ್ಯಕ್ಷ ಕೆ.ವಿ.ಬಾಬು ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಲೀಲಾಕೃಷ್ಣನ್ ಮುಳ್ಳೇರಿಯಾ, ಗುರುದಾಸ್ ಚೇನಕ್ಕೋಡ್, ಪ್ರದೀಪ್ ಕೇಲೋಟ್, ಹರೀಶ್ ಕುದ್ರೆಪ್ಪಾಡಿ ಉಪಸ್ಥಿತರಿದ್ದರು. ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ಬಿ.ಸತ್ಯನಾಥ್ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಸ್ವಾಗತಿಸಿದರು. ರವಿ ವೈ ಬದಿಯಡ್ಕ ವಂದಿಸಿದರು.

ಪದಾಧಿಕಾರಿಗಳ ಆಯ್ಕೆ

2025-26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ವಿ.ಬಾಬು, ಪ್ರಧಾನ ಕಾರ್ಯದರ್ಶಿಯಾಗಿ ಪಿ.ದಿನೇಶ್ ಬಂಬ್ರಾಣ, ಕೋಶಾಧಿಕಾರಿಯಾಗಿ ದಿಲೀಪ್ ಡಿಸೋಜ, ಉಪಾಧ್ಯಕ್ಷರಾಗಿ ಸದಾಶಿವ ಮುಳ್ಳೇರಿಯಾ, ಭಾಸ್ಕರ ಚೆಂಬಿಲೋಡು, ಉಮೇಶ ಮಾನ್ಯ, ರವಿ ಬದಿಯಡ್ಕ, ಜತೆ ಕಾರ್ಯದರ್ಶಿಗಳಾಗಿ ತಂಗಚ್ಚನ್ ಪಾಣತ್ತೂರು, ಅನೀಶ್ ಪರಕ್ಲಯಿ, ರಂಜಿತ್ ಕಾಸರಗೋಡು, ಸೂರ್ಯನಾರಾಯಣ ಕುಬಣೂರ್, ಭಾಸ್ಕರ ಪೊಯಿನಾಚಿ, ಜಿತಿನ್ ಬಾಬು ನೀಲೇಶ್ವರ ಹಾಗೂ ಇತರ 9 ಮಂದಿಯನ್ನು ಕಾಯ್ಕರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net