

ಬಂಟ್ವಾಳ: ಯುವ ಸಮಾಜ ದುಶ್ಚಟಗಳಿಂದ ದೂರವಿದ್ದು, ಸಮಾಜಸೇವೆಯತ್ತ ಒಲವು ಬೆಳೆಸಿಕೊಂಡಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ಜಿಲ್ಲಾ ನ್ಯಾಯಾಧೀಶ ದಿನೇಶ್ ಹೆಗ್ಡೆ ಬದ್ಯಾರು ಹೇಳಿದರು.
ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಪುಂಜಾಲಕಟ್ಟೆ ಶ್ರೀ ಮುರುೇಂದ್ರ ಮಿತ್ರ ಮಂಡಳಿಯ 44ನೇ ಹಾಗೂ ಶ್ರೀ ಮುರುಘೇoದ್ರ ವನಿತಾ ಸಮಾಜದ 34ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಜಯ ಪ್ರಕಾಶ್ ರಾವ್, ಸುರೇಶ್ ಶೆಟ್ಟಿ, ಮೋಕ್ಷಾ ಅವರನ್ನು ಸನ್ಮಾನಿಸಲಾಯಿತು.
ಪಿಲಾತಬೆಟ್ಟು ಪ್ರಾ.ಕೃ.ಸ.ಸಂಘ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಾರದಾ, ಉದ್ಯಮಿ ಓಂ ಪ್ರಸಾದ್, ಪುಂಜಾಲಕಟ್ಟೆ ಕೆಪಿಎಸ್ ಎಸ್‌ಡಿಎಂಸಿ ಅಧ್ಯಕ್ಷ ದಿವಾಕರ ಶೆಟ್ಟಿ ಕಂಗಿತ್ತಿಲು, ಬಂಟ್ವಾಳ ಸ.ಪ್ರೌ.ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಜೋಯಲ್ ಲೋಬೋ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪಿಲಾಬೆಟ್ಟು ಪ್ರಾ.ಕೃ.ಸ.ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಬಿತಾ ದಿನೇಶ್, ಪುಂಜಾಲಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅನಿಲಡೆ, ಮಂಜಲಪಲ್ಕೆ ಶ್ರೀ ಜೈ ಹನುಮಾನ್ ಭಜನಾ ಮಂದಿರದ ಅಧ್ಯಕ್ಷ ಸಂದೀಪ್ ಹಟ್ಟತ್ತೋಡಿ, ಶ್ರೀರಾಮನಗರ ಶ್ರೀ ರಾಮಾಜನೇಯ ಭಜನಾ ಮಂದಿರ ಅಧ್ಯಕ್ಷ ಯಶೋಧರ ನಾಕುನಾಡ್, ಸಂಘ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ, ವನಿತಾ ಸಮಾಜದ ಅಧ್ಯಕ್ಷೆ ಪುಷ್ಪಾಲತಾ ಮೋಹನ್, ಗೌರವಾಧ್ಯಕ್ಷೆ ಆಶಾ ದಿನಕರ ಶೆಟ್ಟಿ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮೇಲ್ಮನೆ ಸ್ವಾಗತಿಸಿದರು. ಮಂಜಪ್ಪ ಮೂಲ್ಯ ವರದಿ ವಾಚಿಸಿದರು. ಪುಷ್ಪಾಲತಾ ಮತ್ತು ರತ್ನದೇವ್ ಸನ್ಮಾನ ಪತ್ರ ವಾಚಿಸಿದರು. ಮುರಳೀ ಅತ್ತಾಜೆ ವಂದಿಸಿದರು. ಎಚ್.ಕೆ.ನಯನಾಡು ನಿರೂಪಿಸಿದರು.