

ಉಳ್ಳಾಲ: ಪಿಲಾರ್ ಯುವಕ ಮಂಡಲದ ಸುವರ್ಣ ಸಂಭ್ರಮ ಪ್ರಯುಕ್ತ ಯೆನೆಪೋಯ ವೈದ್ಯಕೀಯ ಆಸ್ಪತ್ರೆ ಸಹಕಾರದಲ್ಲಿ ಪಿಲಾರ್‌ನಲ್ಲಿ ರಕ್ತದಾನ ಮತ್ತು ವೈದ್ಯಕೀಯ ಉಚಿತ ಶಿಬಿರ ಭಾನುವಾರ ನಡೆಯಿತು.
ಪ್ರಮುಖರಾದ ಮೀನಾಕ್ಷಿ ಸೀತಾರಾಮ ಶೆಟ್ಟಿ ಪಿಲಾರು ಮೇಗಿನಮನೆ, ಉದ್ಯಮಿ ಚಂದ್ರಕಾಂತ್ ಹಾಗೂ ಪುತ್ತು ಪಿಲಾರ್ ಉದ್ಘಾಟಿಸಿದರು. ಮುನ್ನೂರು ಯುವಕ ಮಂಡಲ ಅಧ್ಯಕ್ಷ ಹರೀಶ್ ಮುಂಡೋಳಿ, ಯೆನೆಪೋಯ ಆಸ್ಪತ್ರೆ ವೈದ್ಯರಾದ ಪ್ರಮೋದ್ ಮತ್ತು ಮೊಹ್ಮದ್ ಸಾಲಿ, ಪಿಲಾರ್ ಯುವಕ ಮಂಡಲ ಅಧ್ಯಕ್ಷ ಯಶವಂತ ಶೆಟ್ಟಿ, ಕಾರ್ಯದರ್ಶಿ ಧನರಾಜ್, ಗೌರವಾಧ್ಯಕ್ಷ ಗಜಾನಂದ ಗಟ್ಟಿ, ಕೋಶಾಧಿಕಾರಿ ನವೀನ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.