PHOTOS: ಕತಾರ್​​ನಲ್ಲಿ ಕರ್ನಾಟಕ ಸಂಘದಿಂದ ರಕ್ತದಾನ ಶಿಬಿರ; ಸತ್ಕಾರ್ಯಕ್ಕೆ ಜತೆಯಾದ ಹಲವು ಸಂಘಗಳು

Quatar
Published on

ದೋಹಾ: ಕತಾರ್ ಕರ್ನಾಟಕ ಸಂಘದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 50 ಮಂದಿ ರಕ್ತ ದಾನ ಮಾಡಿದರು.

ಅ.9ರಂದು ಹಮಾದ್​ ವೈದ್ಯಕೀಯ ಕೇಂದ್ರದ ಆವರಣದಲ್ಲಿರುವ ಹಮಾದ್​ ರಕ್ತದಾನ ಕೇಂದ್ರದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪ್ರತಿಯೊಬ್ಬರೂ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸುವ ಮೂಲಕ ರಕ್ತದಾನದೊಂದಿಗೆ ಕೊವಿಡ್​-19 ನಿಯಂತ್ರಣಾ ನಿಯಮ ಪಾಲನೆ ಮಾಡಿ, ಜಾಗೃತಿಯನ್ನೂ ಮೂಡಿಸಿದರು.

ಹಮಾದ್​ ವೈದ್ಯಕೀಯ ಕೇಂದ್ರದ ಮಹಿಳಾ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೆರಿಗೆ ಹಾಗೂ ಸ್ತ್ರೀರೋಗಶಾಸ್ತ್ರ ವಿಶೇಷತಜ್ಞರಾದ ಡಾ.ರಮ್ಯಾ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು. ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಜತೆಗೆ, ಸಭಿಕರು ಕೇಳಿದ ಅನೇಕ ಪ್ರಶ್ನೆಗಳಿಗೂ ಉತ್ತರಿಸಿದರು. ರಕ್ತದಾನಿಗಳು ವೀರರು. ರಕ್ತವನ್ನು ಪ್ಲಾಸ್ಮಾ, ಆರ್​ಬಿಸಿ ಮತ್ತು ಪ್ಲೇಟ್​ಲೆಟ್​ ಎಂದು ವಿಂಗಡಿಸಿ, ಮೂರು ವ್ಯಕ್ತಿಗಳಿಗೆ ನೀಡುತ್ತೇವೆ ಎಂದು ಹೇಳಿದರು.

ಕತಾರ್​ ಕರ್ನಾಟಕ ಸಂಘದ ಅಧ್ಯಕ್ಷ ನಾಗೇಶ್​ ರಾವ್​ ಮಾತನಾಡಿ, ರಕ್ತದಾನ ಜೀವದಾನ. ಇದೊಂದು ಪರಮ ಸತ್ಕಾರ್ಯ ಎಂದರು. .

ತುಳು ಕೂಟ, ಬಂಟರ ಸಂಘ, ಎಸ್​ಕೆಎಂಡಬ್ಲ್ಯೂಎ, ಕೆಎಂಸಿಎ, ಯುಕೆಬಿ ಮತ್ತು ಕತಾರ್ ಬಿಲ್ಲವಾಸ್ ಕರ್ನಾಟಕ ಮೂಲದ ಸಹೋದರ ಸಂಸ್ಥೆಗಳು, ಭಾರತೀಯ ಸಮುದಾಯ ಹಿತೈಷಿ ವೇದಿಕೆಯ (ಐಸಿಬಿಎಫ಼್) ಉಪಾಧ್ಯಕ್ಷ ಮಹೇಶ್ ಗೌಡ, ಜಂಟಿ ಕಾರ್ಯದರ್ಶಿ ಸುಬ್ರಮಣ್ಯ ಹೆಬ್ಬಾಗಿಲು ಪಾಲ್ಗೊಂಡಿದ್ದರು. ಭಾರತೀಯ ರಾಯಭಾರಿ ಕಾರ್ಯಾಲಯದಿಂದ ಪ್ರಥಮ ಕಾರ್ಯದರ್ಶಿ, ಸಾಮಾಜಿಕ ವಿಚಾರಗಳ ವಿಭಾಗದ ಅಧಿಕಾರಿ ಜೇವಿಯರ್ ಧನರಾಜ್ ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net