ಮೂವರು ಸಹೋದರಿಯರ ಎಐ ಆಧಾರಿತ ಚಿತ್ರಗಳಿಂದ ಹಣಕ್ಕಾಗಿ ಬ್ಲ್ಯಾಕ್​​ ಮೇಲ್; ಆತ್ಮಹತ್ಯೆ ಮಾಡಿಕೊಂಡ ಯುವಕ| Suicide

ವಿಜಯವಾಣಿ - 2025-10-27T132119.531
Published on

ಫರಿದಾಬಾದ್: ಹರಿಯಾಣದ ಫರಿದಾಬಾದ್​ನಲ್ಲಿ 19 ವರ್ಷದ ಯುವಕನೊಬ್ಬ ತನ್ನ ಮೂವರು ಸಹೋದರಿಯರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​​(ಎಐ) ಆಧಾರಿತ ಆ್ಯಪ್​ನಿಂದ ರಚಿಸಲಾದ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ತೋರಿಸಿ ದುಷ್ಕರ್ಮಿಗಳ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ ಎಂದು ಸೋಮವಾರ(ಅ. 27) ವರದಿಯಾಗಿದೆ.

ಡಿಎವಿ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿ ರಾಹುಲ್ ಭಾರ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ರಾಹುಲ್ ಜೊತೆಗೆ ಮೊಬೈಲ್ ವಾಟ್ಸಾಪ್ ಚಾಟ್‌ನಲ್ಲಿ ಸಾಹಿಲ್ ಎಂದು ಹೆಸರಿಸಲಾದ ಆರೋಪಿ, ಅಶ್ಲೀಲ ದೃಶ್ಯಗಳನ್ನು ಕಳುಹಿಸಿ ಅವರಿಂದ 20,000 ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಕೊನೆಯ ಸಂಭಾಷಣೆಯಲ್ಲಿ ಹಣವನ್ನು ಪಾವತಿಸದಿದ್ದರೆ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದು, ರಾಹುಲ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದಾನೆ. ಇದಿರಿಂದ ಖಿನ್ನತೆಗೊಳಗಾದ ರಾಹುಲ್ ಶನಿವಾರ ಸಂಜೆ 7 ಗಂಟೆಗೆ ಮಾತ್ರೆ ಸೇವಿಸಿದ್ದಾನೆ. ಆರೋಗ್ಯ ಹದಗೆಟ್ಟಾಗ ಅವರ ಕುಟುಂಬವೂ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಈ ಕುರಿತು ಮಾತನಾಡಿರುವ ರಾಹುಲ್ ತಂದೆ ಮನೋಜ್ ಭಾರ್ತಿ, ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸರಿಯಾಗಿ ಊಟ ಮಾಡುತ್ತಿರಲಿಲ್ಲ ಮತ್ತು ಆಗಾಗ್ಗೆ ಕೋಣೆಯಲ್ಲಿ ಮೌನವಾಗಿರುತ್ತಿದ್ದನು. ಎರಡು ವಾರಗಳ ಹಿಂದೆ ಯಾರೋ ರಾಹುಲ್ ಫೋನ್‌ ಹ್ಯಾಕ್ ಮಾಡಿ ರಾಹುಲ್ ಮತ್ತು ಅವರ ಸಹೋದರಿಯರ ನಗ್ನ ಫೋಟೋಗಳನ್ನು ಬಳಸಿ ಎಐ ಆಧಾರಿತ ಅಶ್ಲೀಲ ಚಿತ್ರಗಳನ್ನು ರಚಿಸಿದ್ದರು ಎಂದು ಆರೋಪಿಸಿದ್ದಾರೆ.

ರಾಹುಲ್ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net