ಇಲ್ಲಿ ಕಪ್ಪು ಬಟ್ಟೆ ತೊಟ್ಟವರಿಗೆ ಪ್ರವೇಶವಿಲ್ಲ!; ಕಪ್ಪು ಮಾಸ್ಕ್ ಧರಿಸಿದವರಿಗೂ ನಿರ್ಬಂಧ!!

vidhanasoudha
Published on

ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಕಪ್ಪು ಬಟ್ಟೆ ಧರಿಸಿದವರಿಗೆ ಪ್ರವೇಶವಿಲ್ಲ!

ಹೌದು, ವಿಧಾನಸಭೆ ಕಲಾಪಕ್ಕೆ ಕಪ್ಪು ಬಟ್ಟೆ ತೊಟ್ಟವರು, ಕಪ್ಪು ಮಾಸ್ಕ್ ಧರಿಸಿದವರಿಗೆ ಪ್ರವೇಶ ನಿಷೇಧಿಸಲಾಗಿದೆ.

ಕಪ್ಪು ಬಟ್ಟೆ ಪ್ರತಿಭಟನೆಯ ಸಂಕೇತ ಎಂಬ ಹಿನ್ನೆಲೆಯಲ್ಲಿ ಕಲಾಪಕ್ಕೆ ಹಾಜರಾಗುವವರಿಗೆ ಕಪ್ಪು ಬಟ್ಟೆ ಧರಿಸಿ ಬರದಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಪ್ಪು ಬಟ್ಟೆ ಧರಿಸಿದ ಪತ್ರಕರ್ತರಿಗೂ ಕಲಾಪದಲ್ಲಿ ಭಾಗವಹಿಸುವುದಕ್ಕೆ ನಿರಾಕರಿಸಲಾಯಿತು.

ಮಾರ್ಷಲ್‌ಗಳು ಕಪ್ಪು ಬಟ್ಟೆ ಹಾಗೂ ಕಪ್ಪು ಮಾಸ್ಕ್ ಧರಿಸಿದವರಿಗೆ ಪ್ರವೇಶ ನೀಡಲಿಲ್ಲ. ಹಾಗಾಗಿ ಕೆಲವರು ಕಲಾಪದಲ್ಲಿ ಭಾಗವಹಿಸದೇ ಹೊರಗುಳಿಯಬೇಕಾಯಿತು. ಕಲಾಪದಲ್ಲಿ ಕಪ್ಪು ಬಟ್ಟೆ ಧರಿಸುವುದಕ್ಕೆ ಈ ಹಿಂದಿನಿಂದಲೂ ನಿಷೇಧವಿತ್ತು. ಆದರೆ, ಅದನ್ನು ಸರಿಯಾಗಿ ಅನುಷ್ಠಾನಗೊಳಿಸಿರಲಿಲ್ಲ. ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net