ಮುಂದಿನ ಮೂರ್ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಪತನ: ರಾಹುಲ್​ ಗಾಂಧಿ ಭವಿಷ್ಯ

Rahul gAndhi
Published on

ಅಮೆರಿಕಾ: ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್​ ಪಕ್ಷ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಲಿದೆ ಎಂದು ರಾಹುಲ್​ ಗಾಂಧಿ ಭವಿಷ್ಯ ನುಡಿದಿದ್ದಾರೆ.

ಯುಎಸ್​ ಪ್ರವಾಸದಲ್ಲಿರುವ ರಾಹುಲ್​ ಗಾಂಧಿ ಭಾರತೀಯ ಅಮೆರಿಕನ್​ ಫ್ರಾಂಕ್​ ಇಸ್ಲಾಂ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಸಂಪೂರ್ಣವಾಗಿ ನಿರ್ಮೂಲನೆ

ಭಾರತದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯನ್ನು ಕಾಂಗ್ರೆಸ್​ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಿದೆ. ಜನರ ಬೆಂಬಲ ಇಲ್ಲದ ಆಡಳಿತ ಪಕ್ಷವನ್ನು ಸೋಲಿಸಲು ವಿರೋಧ ಪಕ್ಷ ಸನ್ನದ್ದವಾಗಿದೆ ಎಂದು ಹೇಳಿದ್ದಾರೆ.

Rahul Gandhi

ನಾವು ಮುಂದಿನ ಮೂರ್ನಾಲ್ಕು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯೊಂದಿಗೆ ನೇರವಾಗಿ ಹೋರಾಡುತ್ತೇವೆ.ಈ ಮೂಲಕ ಬಿಜೆಪಿ ಸೋಲಿನೊಂದಿಗೆ ನಿರ್ನಾಮವಾಗುವುದನ್ನು ನೀವುಗಳು ನೋಡುತ್ತೀರ.

ಸಾಧ್ಯವಿಲ್ಲ ಎಂದು ಹೇಳುತ್ತಾರೆ

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯವರು ಕಠಿಣ ಸವಾಲುಗಳನ್ನು ಎದುರಿಸುತ್ತಾರೆ ಎಂಬುದನ್ನು ನಾನು ಈಗಲೇ ಹೇಳಬಲ್ಲೆ. ನಾವು ಕರ್ನಾಟಕದಲ್ಲಿ ಮಾಡಿದ ಪ್ರಯೋಗವನ್ನೆ ಬೇರೆಡೆ ಮಾಡುತ್ತೀವಿ. ಆದರೆ, ನೀವುಗಳು ಈ ಬಗ್ಗೆ ಭಾರತೀಯ ಮಾಧ್ಯಮಗಳಿಗೆ ಕೇಳಿದರೆ ಅದು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಭಾರತದ ಶೇ.60ರಷ್ಟು ಜನ ನರೇಂದ್ರ ಮೋದಿ ಅವರಿಗೆ ಮತ ಹಾಲುವುದಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಿ. ಅವರು ಗದ್ದಲ ಎಬ್ಬಿಸುವುದರಲ್ಲಿ ಹೆಚ್ಚು ಉತ್ತಮರು. ದೇಶದ ಬಹುಪಾಲು ಜನತೆ ಬಿಜೆಪಿಯನ್ನು ಬೆಂಬಲಿಸುತ್ತಿಲ್ಲ ಎಂದು ಭಾರತೀಯ ಅಮೆರಿಕನ್​ ಫ್ರಾಂಕ್​ ಇಸ್ಲಾಂ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net