ಬಿಜೆಪಿಯನ್ನು ಬೆಂಬಲಿಸಿ ಮತ ಹಾಕುವವರು ರಾಕ್ಷಸರು: ರಣದೀಪ್​ ಸುರ್ಜೇವಾಲ

Randeep Surjewala
Published on

ಹರಿಯಾಣ: ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿ ಅದಕ್ಕೆ ಮತ ಹಾಕುವವರು ರಾಕ್ಷಸರು ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕ, ರಾಜ್ಯಸಭೆ ಸದಸ್ಯ ರಣದೀಪ್​ ಸಿಂಗ್​ ಸುರ್ಜೇವಾಲ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.

ಹರಿಯಾಣದಲ್ಲಿ ಪಕ್ಷದ ಕಾರ್ಯಕ್ರಮ ಒಂದನ್ನು ಉದ್ದೇಶಿಸಿ ಮಾತನಾಡುವ ವೇಳೆ ಬಿಜೆಪಿಯ ಮಿತ್ರ ಪಕ್ಷ ಜನನಾಯಕ ಜನತಾ ಪಾರ್ಟಿಯನ್ನು ಬೆಂಬಲಿಸುವವರು ಸಹ ರಾಕ್ಷಸರು ಎಂದು ಹರಿಹಾಯ್ದಿದ್ದಾರೆ.

ಸುರ್ಜೇವಾಲಾ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಕಿಡಿಕಾರಿದ ಬಿಜೆಪಿ ನಾಯಕರು ಚುನಾವಣೆಯಲ್ಲಿನ ಸೋಲುಗಳು ಕಾಂಗ್ರೆಸ್​ನ ಈ ಹತಾಶೆ ಮನಸ್ಥಿತಿಗೆ ಕಾರಣವಾಗಿದೆ. ತಮ್ಮ ಪಕ್ಷದ ಯುವರಾಜನನ್ನು ಲಾಂಚ್​ ಮಾಡುವಲ್ಲಿ ವಿಫಲರಾಗಿರುವವರು ಈಗ ಸಾರ್ವಕಜನಿಕರನ್ನು ಗುರಿಯಾಗಿಸಿ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಇದಕ್ಕೆಲ್ಲಾ ಉತ್ತರ ಕೊಡಲಿದ್ದಾರೆ ಎಂದು ಕಾಂಗ್ರೆಸ್​ ನಾಯಕನ ಹೇಳಿಕೆಗೆ ಚಾಟಿ ಬೀಸಿದ್ದಾರೆ.

ಸುರ್ಜೇವಾಲಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ನಿಮ್ಮ ಪಕ್ಷದವರು ಸಾರ್ವಜನಿಕರನ್ನು ರಾಕ್ಷಸರು ಎಂದು ಕರೆಯುತ್ತಿದ್ದಾರೆ. ರಾಹುಲ್​ ಹಾಗೂ ಸೋನಿಯಾ ಗಾಂಧಿ ಅವರೇ ಇದು ನಿಮ್ಮ ಪ್ರೇಮದ ಆಂಗಡಿಯೇ. ನಿಮ್ಮನೇ ನೀವು ದೇವರು ಎಂದುಕೊಂಡಿದ್ದೀರಾ ಅದಕ್ಕಾಗಿ ಜನರನ್ನು ದೂಷಿಸುವುದು ಒಳ್ಳೆಯ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.

ಇತ್ತ ತಮ್ಮ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ರಣದೀಪ್​ ಸುರ್ಜೇವಾಲಾ ಸಮಾಜದಲ್ಲಿ ಬೆಂಕಿ ಹಚ್ಚಿ, ಯುವ ಜನರ ಕನಸುಗಳನ್ನೂ ಸಾಯಿಸುತ್ತಿರುವವರು ರಾಕ್ಷಸರಲ್ಲದೇ ಮತ್ತೇನೂ. ತನ್ನ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಬಿಜೆಪಿ ನಾಯಕರು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ.

ನಾನು ಒಬ್ಬ ಜನಪ್ರತಿನಿಧಿಯಾಗಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನನ್ನ ಕರ್ತವ್ಯ. ನನ್ನ ಕೊನೆಯ ಉಸಿರಿರುವವರೆಗೂ ನಾನು ಜನರ ಪರ ಧ್ವನಿ ಎತ್ತಲು ಸಿದ್ದನಿದ್ದೇನೆ ಎಂದು ಕಾಂಗ್ರೆಸ್​ ನಾಯಕ, ರಾಜ್ಯಸಭೆ ಸದಸ್ಯ ರಣದೀಪ್​ ಸುರ್ಜೇವಾಲಾ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net