ಕಾಂಗ್ರೆಸ್​ಗೆ ಗೆಲ್ಲುವ ಅಭ್ಯರ್ಥಿಗಳಲ್ಲ, ನಿಲ್ಲುವ ಅಭ್ಯರ್ಥಿಗಳೇ ಸಿಗುತ್ತಿಲ್ಲ: ಬಿಜೆಪಿ ವ್ಯಂಗ್ಯ

BJP Congress
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​ ನಿರಾಕರಿಸಿರುವ ಕಾರಣ ಕಾಂಗ್ರೆಸ್​ ಸೇರಿರುವ ಮಾಜಿ ಸಿಎಂ ಜಗದೀಶ್​​ ಶೆಟ್ಟರ್​, ಲಕ್ಷ್ಮಣ್​ ಸವದಿ ಹಾಗೂ ಡಿ.ಕೆ. ಶಿವಕುಮಾರ್​​ ವಿರುದ್ಧ ಸರಣಿ ಟ್ವೀಟ್​ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.

ಗೆಲ್ಲುವ ಅಭ್ಯರ್ಥಿಗಳಲ್ಲ, ಕಾಂಗ್ರೆಸ್​ಗೆ ನಿಲ್ಲುವ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಟ್ವೀಟ್​ ಮಾಡುವ ಮೂಲಕ ಟೀಕಿಸಿದೆ.

ನಿಮ್ಮ ಹಳೇ ಬಂಡಿಗೆ ಎಷ್ಟೇ ಬಣ್ಣ ಬಳಿದರೂ ಹೊಸತಾಗುವುದಿಲ್ಲ

ಈ ಕುರಿತು ಟ್ವೀಟ್​ ಮಾಡಿರುವ ಬಿಜೆಪಿ ಕಾಂಗ್ರೆಸ್​ಗೆ ಗೆಲ್ಲುವ ಅಭ್ಯರ್ಥಿಗಳಲ್ಲ ನಿಲ್ಲುವ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹಾಗಾಗಿ ಅಭ್ಯರ್ಥಿಗಳನ್ನು ಆಮದು ಮಾಡುವ ಸ್ಥಿತಿಗೆ ತಲುಪಿದೆ.

ಕಮಲವನ್ನೇ ಅರಳಿಸುತ್ತೇವೆಂದು ಜನ ತೀರ್ಮಾನ ಮಾಡಿರುವಾಗ, ನಿಮ್ಮ ಹಳೇ ಬಂಡಿಗೆ ಎಷ್ಟೇ ಬಣ್ಣ ಬಳಿದರೂ ಬಂಡಿ ಮಾತ್ರ ಹೊಸತಾಗುವುದಿಲ್ಲ ಎಂದು ವ್ಯಂಗ್ಯವಾಡಿದೆ.

ಚುಕ್ಕಾಣಿ‌ ಹಿಡಿದವರಿಗೆ ದುಡ್ಡೇ ದೊಡ್ಡಪ್ಪ

ಇನ್ನು ಇತ್ತೀಚಿಗೆ ಪ್ರಕಟವಾದ ಕೆಪಿಸಿಸಿ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಕೃಷ್ಣಮೂರ್ತಿ ತಮ್ಮಗೆ ಟಿಕೆಟ್​ ಸಿಗದಿದ್ದಕ್ಕೆ ಡಿಕೆ ಸಹೋದರರ ವಿರುದ್ಧ ಆರೋಪವನ್ನು ಮಾಡಿದ್ಧಾರೆ.

ರಾಜ್ಯ ಕಾಂಗ್ರೆಸ್​ ಚುಕ್ಕಾಣಿ ಹಿಡಿದವರಿಗೆ ಚುಕ್ಕಾಣಿ‌ ಹಿಡಿದವರಿಗೆ ದುಡ್ಡೇ ದೊಡ್ಡಪ್ಪ. ಹಣಕ್ಕಾಗಿ ಯಾವ‌ ಮಟ್ಟಕ್ಕೂ ಇಳಿಯಲು‌ ತಯಾರಿರುವ ಡಿ.ಕೆ. ಶಿವಕುಮಾರ್​ ಹಣಕ್ಕಾಗಿ‌ ಟಿಕೆಟ್ ಮಾರಿಕೊಂಡು ಸ್ವಂತ ಸಮುದಾಯದವರಿಗೇ ಅನ್ಯಾಯ ಮಾಡಿದ್ದಾರೆಂಬ ಕೂಗು ದಾಸರಹಳ್ಳಿ ಕ್ಷೇತ್ರದಿಂದ ಕೇಳಿಬಂದಿದೆ. ಇನ್ನುಳಿದ ಕ್ಷೇತ್ರಗಳ ಕಥೆಯೂ ಇದೇ ಎಂದು ಟ್ವೀಟ್​ ಮಾಡಿ ಕಿಡಿಕಾರಿದೆ.

BJP Tweet
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net