More

  ಬಿಜೆಪಿ ಮೋದಿ ಬದಲಿಗೆ ಬೇರೆ ಅವರನ್ನು ಪ್ರಧಾನಿ ಮಾಡಲಿ ಎಂದಿದ್ದೇಕೆ ಟಿಎಂಸಿ ಸಂಸದೆ ಸಾಗರಿಕಾ ಘೋಷ್​​

  ಕೋಲ್ಕತ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಂಪೂರ್ಣ ಪ್ರಚಾರ ಕೇಂದ್ರೀಕೃತವಾಗಿದ್ದರೂ ಬಹುಮತ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ. ಆದ್ದರಿಂದ ಬಿಜೆಪಿ ಹೊಸ ನಾಯಕನನ್ನು ಆಯ್ಕೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಬದಲಿಗೆ ಬೇರೆಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಿ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಸಾಗರಿಕಾ ಘೋಷ್ ಹೇಳಿದ್ದಾರೆ.

  ಇದನ್ನು ಓದಿ: “ಸಂಸತ್ತಿನಲ್ಲಿ ವಿದ್ಯಾರ್ಥಿಗಳ ಧ್ವನಿಯಾಗುತ್ತೇನೆ”: ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಭರವಸೆ

  ವಾರಣಾಸಿಯಲ್ಲಿ ಬಹುತೇಕ ಸೋತರು, ಅಯೋಧ್ಯೆಯಲ್ಲಿ ಸೋತರು ಸ್ವಯಂ ಕೇಂದ್ರಿತ ಚುನಾವಣಾ ಪ್ರಚಾರದ ಹೊರತಾಗಿಯೂ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. “ಪ್ರಧಾನಿ” ಜನಾದೇಶವನ್ನು ಕಳೆದುಕೊಂಡಿದ್ದಾರೆ ಮತ್ತು ಜನರು ಅವರನ್ನು ತಿರಸ್ಕರಿಸಿದ್ದಾರೆ. ಆದರೂ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದರು.

  ಪ್ರಧಾನಿ ಮೋದಿ ಮೋದಿ ಮತ್ತು ಕೇಂದ್ರ ಸಚಿವರ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಮನೆಯ ಎಲ್ಲ ದೀಪಗಳನ್ನು ಆಫ್ ಮಾಡಿ ಕತ್ತಲೆಯಲ್ಲಿ ಕುಳಿತಿದ್ದರು ಎಂದು ಅವರು ಹೇಳಿದರು. ಭಾನುವಾರ (ಜೂನ್​​​ 9) ನಡೆದ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ತೃಣಮೂಲ ಕಾಂಗ್ರೆಸ್ ಭಾಗವಹಿಸಿರಲಿಲ್ಲ. (ಏಜೆನ್ಸೀಸ್​​)

  ಏನ್​ ಟೇಸ್ಟ್ ಗೊತ್ತಾ ಈ ಚಿಕನ್​ ಕಟ್ಲೆಟ್​​ : ಮಾಡುವ ಸುಲಭ ವಿಧಾನ ಹೀಗಿದೆ

  See also  ಬೇಕಲದಲ್ಲಿ ಬೀದಿ ದೀಪಗಳಿಲ್ಲ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts