ಯದುಶ್ರೀಗೆ ಬಿಜೆಪಿಯಿಂದ ಗುರುವಂದನೆ

New Project (16)
Published on

ಕಡಬ: ಕೈೊಲ ಬಿಜೆಪಿ ಶಕ್ತಿಕೇಂದ್ರ ಮತ್ತು ಮಹಿಳಾ ಮೋರ್ಚಾ ವತಿಯಿಂದ ಕೈೊಲ 4ನೇ ಬೂತ್ ವತಿಯಿಂದ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಆಲಂಕಾರು ಶ್ರೀ ಭಾರತಿ ಶಾಲೆಯಲ್ಲಿ 25 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಆನೆಗುಂಡಿ ನಿವಾಸಿ ಯದುಶ್ರೀ ಅವರಿಗೆ ಭಾನುವಾರ ಗುರುವಂದನೆ ಸಲ್ಲಿಸಲಾಯಿತು.

ಬಿಜೆಪಿ ಮಂಡಲ ಉಪಾಧ್ಯಕ್ಷೆ ತೇಜಸ್ವಿನಿ ಕಟ್ಟಪುಣಿ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹೇಮಾ ಮೋಹನ್ ದಾಸ್, ಅಲಂಕಾರು ಕೃಷಿ ಪತ್ತಿನ ಸಹಕಾರಿ ಸಂದ ನಿರ್ದೇಶಕ ಅಶೋಕ್ ಕೈೊಲ, ಕೈೊಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೀನಪ್ಪ ಗೌಡ ವಲಕಡಮ, ಕೊಲ ಶಕ್ತಿ ಕೇಂದ್ರ ಅಧ್ಯಕ್ಷ ಪ್ರಕಾಶ್ ಕೆ.ಆರ್., ಬೂತ್ ಅಧ್ಯಕ್ಷರಾದ ಸೀತಾರಾಮ್ ವಳಕಡಮ, ಮಲ್ಲಿಕಾ ಕರುಣಾಕರ ಚೌಟ, ಜಯಶ್ರೀ ಬಡ್ಡಮೆ, ಗ್ರಾ.ಪಂ. ಸದಸ್ಯರಾದ ಕಮಲಾಕ್ಷಿ, ಚಂದ್ರಶೇಖರ್ ಮಾಳ, ಬೂತ್ ಕಾರ್ಯದರ್ಶಿಗಳಾದ ಹರಿಶ್ಚಂದ್ರ ಮಾಳ, ವಿನಯ್ ರೈ ಪಟ್ಟೆ, ಕಾಂತಿಮಣಿ, ಮನೆಯವರಾದ ಮಮತಾ ಅರ್ಜುನ್ ವೈ.ಟಿ., ಅಭಿನವ್ ವೈ.ಟಿ., ಅನುಜ್ಞಾ ವೈ.ಟಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net