ಸಿಟಿಆರ್​ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಗ್ರಾಹಕರೊಂದಿಗೆ ಹರಟೆ, ಉಪಾಹಾರ ಸೇವನೆ

JP nadda in Bengaluru
Published on

ಬೆಂಗಳೂರು: ವಿಜಯಸಂಕಲ್ಪ ಯಾತ್ರೆ ಸಮಾವೇಶಕ್ಕಾಗಿ ಆಗಮಿಸಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೆಳಗಿನ ಉಪಾಹಾರಕ್ಕಾಗಿ ಮಲ್ಲೇಶ್ವರದ ಹೆಸರಾಂತ ಸಿಟಿಆರ್ ಹೋಟೆಲ್​​ಗೆ ತೆರಳಿದ್ದರು.

ಈ ವೇಳೆ ಗ್ರಾಹಕರೊಂದಿಗೆ ಲೋಕಾಭಿರಾಮ ಮಾತು, ಔಪಚಾರಿಕ ಕುಶಲೋಪರಿ, ಜತೆಗಿದ್ದ ಕಾರ್ಯಕರ್ತರ‌ ಜತೆಗೆ ಹರಟೆ ಕೊಚ್ಚುತ್ತಾ, ಸಿಟಿಆರ್ ವಿಶೇಷತೆ ತಿಳಿದುಕೊಂಡು ಮಸಾಲೆ ದೋಸೆ ಸವಿದರು.

ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಸಂಸದ ತೇಜಸ್ವಿ ಸೂರ್ಯ ಇನ್ನಿತರರು ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net