ಬಿಜೆಪಿ ಸಂಸದ ಗೌತಮ್​ ಗಂಭೀರ್​ಗೆ ಜೀವ ಬೆದರಿಕೆ; ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸ್

gautamgambhir
Published on

ನವದೆಹಲಿ: ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟ್​ ಆಟಗಾರ ಗೌತಮ್ ಗಂಭೀರ್​ಗೆ 'ಐಸಿಸ್​ ಕಾಶ್ಮೀರ' ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಬಂದಿದೆ. ಈ ಬಗ್ಗೆ ಮಂಗಳವಾರ ರಾತ್ರಿ ಗಂಭೀರ್​ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ಅವರ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪೂರ್ವ ದೆಹಲಿಯ ಲೋಕಸಭಾ ಸದಸ್ಯ ಗೌತಮ್​ ಗಂಭೀರ್​ಗೆ ಈಮೇಲ್​ಗಳ ರೂಪದಲ್ಲಿ ಬೆದರಿಕೆಗಳು ಬಂದಿವೆ. ಈ ಬಗ್ಗೆ ನಿನ್ನೆ ರಾತ್ರಿ ದೂರು ಬಂದಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ತನಿಖೆ ಆರಂಭಿಸಿದ್ದು ಗಂಭೀರ್​​ರ ದೆಹಲಿಯ ರಾಜೇಂದ್ರ ನಗರದ ನಿವಾಸಕ್ಕೆ ಸೂಕ್ತ ಭದ್ರತೆ ನೀಡಲಾಗಿದೆ ಎಂದು ಡಿಸಿಪಿ ಶ್ವೇತಾ ಚೌಹಾನ್​ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net