More

    ರಾಹುಲ್​ ಗಾಂಧಿಯ ಕೈಲಿ ‘ಲೆಫ್ಟ್ ರೈಟ್’ ಹೇಳಿಸಿದ ಬಿಜೆಪಿ!

    ನವದೆಹಲಿ: ಭಾರತ್ ಜೋಡೊ ಯಾತ್ರೆಯ ಬಗ್ಗೆ ತಮಾಷೆ ಮಾಡುವ ಆ್ಯನಿಮೇಟೆಡ್ ವಿಡಿಯೋವೊಂದನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿಯ ಬಳಿ ‘ಲೆಫ್ಟ್ ರೈಟ್’ ಎಂದು ಹೇಳಿಸಿ ಬಿಜೆಪಿ ಕಾಲೆಳೆದಿದೆ.

    ಈ ವಿಡಿಯೊವನ್ನು ಬಿಜೆಪಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದೆ. ಇದಕ್ಕೆ ‘ಮಮ್ಮಿ, ಈ ದುಃಖ ಯಾಕೆ ಮುಗಿಯಲ್ಲ… ಖತಮ್, ಟಾಟಾ, ಗುಡ್​ಬೈ’ ಎಂದು ಶೀರ್ಷಿಕೆ ನೀಡಿದೆ. ಎರಡು ನಿಮಿಷವಿರುವ ಈ ವಿಡಿಯೋದಲ್ಲಿ ರಾಹುಲ್​ ಗಾಂಧಿಯನ್ನು ಶೋಲೆ ಚಿತ್ರದಲ್ಲಿ ಬರುವ ಅಸ್ರಾನಿಯ ಪಾತ್ರದಂತೆ ತೋರಿಸಲಾಗಿದೆ. ಇದರಲ್ಲಿ ಗೋವಾದಲ್ಲಿ ಪಕ್ಷ ಬಿಡುತ್ತಿರುವ ನಾಯಕರು, ರಾಜಸ್ಥಾನದ ಒಳಜಗಳ ಇತ್ಯಾದಿಯನ್ನು ತೋರಿಸಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ‘ಈ ವಿಡಿಯೋ ಬಿಜೆಪಿಯ ಹತಾಷೆಯನ್ನು ತೋರಿಸುತ್ತದೆ’ ಎಂದು ಹೇಳಿದೆ. ಕಾಂಗ್ರೆಸ್​ನ ಸಂವಹನ ಕಾರ್ಯದರ್ಶಿ ಜೈರಾಮ್ ರಮೇಶ್ ಬಿಜೆಪಿಯ ಈ ನಡೆಯನ್ನು ‘ಫ್ರಸ್ಟ್ರೇಶನ್+ಡೆಸ್ಪರೇಶನ್ = ಆ್ಯನಿಮೇಷನ್’ ಎಂದು ಕರೆದು ಕಾಲೆಳೆದಿದ್ದಾರೆ. ಜೊತೆಗೆ ‘ಇದು ಭಾರತ್​ ಜೋಡೊ ಯಾತ್ರೆಯ ಯಶಸ್ಸನ್ನು ನೊಡಲಾಗದೆ ಹೀಗೆಲ್ಲ ಮಾಡುತ್ತಿದ್ದಾರೆ’ ಎಂದಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts