ಬಿಜೆಪಿ-ಮೆಹಬೂಬಾ ಮುಫ್ತಿ ಮೈತ್ರಿ 'ಸೈದ್ಧಾಂತಿಕ' ಲವ್​ ಜಿಹಾದಾ?: ಶಿವಸೇನೆ ಪ್ರಶ್ನೆ

saamana
Published on

ಮುಂಬೈ: ಲವ್ ಜಿಹಾದ್ ಕಾನೂನಿನ ವಿಚಾರ ದೇಶಾದ್ಯಂತ ಗಮನಸೆಳೆದಿರುವ ಸಂದರ್ಭದಲ್ಲೇ ಶಿವಸೇನೆಯ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಬಿಜೆಪಿಯನ್ನು ಗುರಿಯಾಗಿಸಿ ಟೀಕೆ ವ್ಯಕ್ತವಾಗಿದೆ. ಲವ್ ಜಿಹಾದ್ ಕುರಿತ ವ್ಯಾಖ್ಯಾನ ಮತ್ತು ಕಾನೂನಿನ ವಿಚಾರವಾಗಿ ಯೋಗಿ ಆದಿತ್ಯನಾಥ್ ಅವರೋ ಅಥವಾ ಶಿವರಾಜ್ ಸಿಂಗ್ ಚೌಹಾಣ್ ಅವರೋ ನೀಡುವ ವ್ಯಾಖ್ಯಾನವನ್ನು ದೇಶ ಖಂಡಿತವಾಗಿಯೂ ಅನುಮೋದಿಸುವುದಿಲ್ಲ ಎಂದು ಅದು ಹೇಳಿದೆ.

ಹೀಗೆ, ಲವ್​ ಜಿಹಾದ್​ ವಿಷಯವನ್ನು ರಾಜಕೀಯಕ್ಕೆ ಅನ್ವಯಸಿಕೊಂಡು ಬಿಜೆಪಿ ವಿರುದ್ಧ ಶಿವಸೇನೆ ಕಿಡಿಕಾರಿದೆ. ಅಷ್ಟೇ ಅಲ್ಲ, ಸೈದ್ಧಾಂತಿಕ ಲವ್ ಜಿಹಾದ್​ನಿಂದ ದೇಶಕ್ಕೆ ಎಷ್ಟು ಹಾನಿಯಾಗಿದೆಯೋ ಅಷ್ಟೇ ಹಾನಿ ಹಿಂದುತ್ವಕ್ಕೂ ಆಗಿದೆ ಎಂಬ ಸಾಲನ್ನು ಉಲ್ಲೇಖಿಸಿದೆ!

ಸಾಮ್ನಾ ಸಂಪಾದಕೀಯದಲ್ಲಿರುವುದಿಷ್ಟು- ಬೇರೆ ಬೇರೆ ಧರ್ಮದವರಿಬ್ಬರು ಮದುವೆ ಆದರೆ ಅದು ಲವ್ ಜಿಹಾದ್. ಹಾಗಾದರೆ ಮೆಹಬೂಬಾ ಮುಫ್ತಿ ಅವರ ಪಕ್ಷದೊಂದಿಗಿನ ಮೈತ್ರಿಯೂ 'ಸೈದ್ಧಾಂತಿಕ' ಲವ್​ ಜಿಹಾದಾ ಯಾಕಾಗಬಾರದು? ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಘ ಮುಕ್ತ, ಮೋದಿ ಮುಕ್ತ ಹಿಂದುಸ್ಥಾನದ ನಿಲುವು ಹೊಂದಿದವರು. ಅವರ ನಿಲುವು ಬದಿಗಿಟ್ಟು ಮೈತ್ರಿಮಾಡಿಕೊಂಡು ಸರ್ಕಾರ ರಚಿಸಿಲ್ಲವೇ ಅದನ್ನೇಕೆ ಲವ್​ ಜಿಹಾದ್ ಎಂದು ಹೇಳಬಾರದು? ಸೈದ್ಧಾಂತಿಕ ಲವ್​ ಜಿಹಾದ್​ನಿಂದಾಗಿ ದೇಶಕ್ಕಷ್ಟೇ ಅಲ್ಲ, ಹಿಂದುತ್ವಕ್ಕೂ ಏಟು ಬಿದ್ದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net