ಇಂಟೆಲಿಜೆನ್ಸ್ ವರದಿಯಿಂದ ಬಿಜೆಪಿ ಹೈಕಮಾಂಡ್ ಪುಲ್ ಖುಷ್; ಏನಿದೆ ಗೊತ್ತಾ ವರದಿಯಲ್ಲಿ?!

bommai bsy
Published on

ಬೆಂಗಳೂರು: ಕೇಂದ್ರ ಗುಪ್ತಚರ ಇಲಾಖೆಯ ಆಂತರಿಕ ವರದಿ ಇದೀಗ ಕೇಂದ್ರ ಸರ್ಕಾರವನ್ನು ತಲುಪಿಯಾಗಿದೆ. ಮಾತ್ರವಲ್ಲ, ಈ ಇಂಟೆಲಿಜೆನ್ಸ್ ವರದಿಯಿಂದ ಬಿಜೆಪಿ ಹೈಕಮಾಂಡ್ ಬಹಳ ಸಂತೋಷಗೊಂಡಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯವರು ಸಮೀಕ್ಷೆ ನಡೆಸಿದ್ದಾರೆ. ಗುಟ್ಟಾಗಿಯೇ ಮತದಾರರ ಅಭಿಪ್ರಾಯ ಸಂಗ್ರಹಿಸಿರುವ ಇಲಾಖೆ, ಒಟ್ಟಾರೆ ಮೂಡ್​ನ ಚಿತ್ರಣವನ್ನೂ ಪಡೆದಿದೆ.

ಆರಂಭದಿಂದಲೂ ಉತ್ತಮ ಪರಿಸ್ಥಿತಿ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ಪ್ರಚಾರಕ್ಕೆ ಧುಮುಕಿದ ಬಳಿಕ ಎರಡೂ ಕ್ಷೇತ್ರಗಳಲ್ಲಿ ಆನೆಬಲ ಬಂದಂತಾಗಿದೆ. ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಲಾಗಿದ್ದು, ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಖಚಿತ ಎಂದು ಇಂಟೆಲಿಜೆನ್ಸ್ ವರದಿಯಲ್ಲಿ ಉಲ್ಲೇಖಗೊಂಡಿದೆ. ಈ ವರದಿ ಕೇಂದ್ರವನ್ನು ತಲುಪಿದ್ದು, ಬಿಜೆಪಿ ಹೈಕಮಾಂಡ್ ಫುಲ್ ಖುಷ್ ಆಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net