

ನವದೆಹಲಿ: ಬಿಜೆಪಿ ಪಕ್ಷದಲ್ಲಿ ಬುಧವಾರದಂದು ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಶಾಹೀನ್ಬಾಗ್ ಪ್ರತಿಭಟನೆ ವೇಳೆ ಗುಂಡು ಹಾರಿಸಿ ಜೈ ಸೇರಿದ್ದ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದ್ದು, ಕೆಲವೇ ಗಂಟೆಗಳಲ್ಲಿ ಆತನನ್ನು ಉಚ್ಛಾಟನೆ ಮಾಡಲಾಗಿದೆ.
ಫೆಬ್ರವರಿಯಲ್ಲಿ ಶಾಹೀನ್ಬಾಗ್ನಲ್ಲಿ ಸಿಎಎ ವಿರೋಧಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆಯಲ್ಲಿ ಕಪಿಲ್ ಗುರ್ಜರ್ ಹೆಸರಿನ ವ್ಯಕ್ತಿ ಗುಂಡು ಹಾರಿಸಿದ್ದ. ಅದಕ್ಕಾಗಿ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಆತ ಜಾಮೀನಿನ ಮೇಲೆ ಹೊರಬಂದಿದ್ದ. ಅದೇ ವ್ಯಕ್ತಿ ಇಂದು ಗಾಜಿಯಾಬಾದ್ ಜಿಲ್ಲಾ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾನೆ.
ಕಪಿಲ್ ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಆತನನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಪಕ್ಷ ಹೇಳಿಕೊಂಡಿದೆ. ಮೇಲ್ದರ್ಜೆಯ ನಾಯಕರು ಗಾಜಿಯಾಬಾದ್ನ ನಾಯಕರಿಗೆ ಕಪಿಲ್ ಪಕ್ಷ ಸೇರಿದ್ದರ ಕುರಿತಾಗಿ ತರಾಟೆ ತೆಗೆದುಕೊಂಡಿದ್ದು, ಅದೇ ಹಿನ್ನೆಲೆಯಲ್ಲಿ ಆತನನ್ನು ಪಕ್ಷದಿಂದ ತೆಗೆದಿರುವುದಾಗಿ ಹೇಳಲಾಗಿದೆ. ಕಪಿಲ್ನ ಬಗ್ಗೆ ತಿಳಿಯದೆಯೇ ಆತನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು, ತಪ್ಪಾಗಿರುವುದಾಗಿ ಜಿಲ್ಲಾ ನಾಯಕರು ಮೇಲಿನ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)