ಸಿನಿಮಾ

ಜೆಡಿಎಸ್ ಅಭ್ಯರ್ಥಿಯಿಂದ ಕಿಡ್ನಾಪ್ ಹುನ್ನಾರ! ಪೊಲೀಸ್ ಠಾಣೆಯ ಮೆಟ್ಟಿಲೇರಿದ ಬಿಜೆಪಿ ಕಾರ್ಯಕರ್ತರು

ಬೆಂಗಳೂರು: ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಜೆಡಿಎಸ್ ಅಭ್ಯರ್ಥಿ ಒಬ್ಬರು ಬಿಜೆಪಿ ಅಭ್ಯರ್ಥಿ ವಿರುದ್ಧ ಸುಳ್ಳು ಕಿಡ್ನಾಪ್ ಆರೋಪ ಹೊರಿಸಿ ಅನುಕಂಪದ ಆಧಾರದಲ್ಲಿ ಚುನಾವಣೆ ಗೆಲ್ಲುವ ತಂತ್ರ ಹೂಡಿದ್ದರು ಆರೋಪಿಸಲಾಗಿದೆ.

ಈ ಘಟನೆ ನಡೆದದದ್ದು ಯಲಹಂಕ ಕ್ಷೇತ್ರದಲ್ಲಿ. ಈ ಹುನ್ನಾರದ ವಿರುದ್ದ ಎಸ್.ಆರ್ ವಿಶ್ವನಾಥ್ ರಾಜಾನುಕುಂಟೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಅಭ್ಯರ್ಥಿ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಬಾರ್​ನಲ್ಲಿ ಮದ್ಯಪಾನ ಮಾಡುವಾಗ ಶುರುವಾದ ಕಿರಿಕ್; ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಮಾಡಿದವರ ಮೇಲೆ ದಾಳಿ! 

ಹೀಗಿತ್ತು ಕಿಡ್ನಾಪ್ ಮಾಸ್ಟರ್ ಪ್ಲಾನ್!

ಬೆಂಗಳೂರಿನ ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ವಿರುದ್ಧ ಷಡ್ಯಂತ್ರ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ ಮುನೇಗೌಡರೇ ಷಡ್ಯಂತ್ರ ಮಾಡಿ ತನ್ನ ಕುಟುಂಬದ ಸದಸ್ಯರನ್ನ ತಾನೇ ಕಿಡ್ನಾಪ್ ಮಾಡಿಸುವುದು, ನಂತರ ಈ ಪ್ರಕರಣವನ್ನು ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ಮೇಲೆ ಹಾಕುವುದು, ಆ ಮೂಲಕ ಯಲಹಂಕ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸಿ ಜನರಿಂದ ಅನುಕಂಪಗಿಟ್ಟಿಸಿ ಮತಗಳಿಸುವುದು ಉದ್ದೇಶವಾಗಿತ್ತು. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿ ವೈರಲ್ ಆಗ್ತಿವೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಯಲಹಂಕ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು, ಪ್ರತಿಭಟನೆಗೆ ಇಳಿದಿದ್ದಾರೆ.

ಇದನ್ನೂ ಓದಿ: ರಿವಾಲ್ವರ್​ನಿಂದ ಪತ್ನಿ ಮತ್ತು ಮಗನನ್ನೇ ಹತ್ಯೆ ಮಾಡಿದ ಎಎಸ್​ಐ; ಪರಾರಿಯಾಗುತ್ತಲೇ ಬಾಲಕಿಯ ಕಿಡ್ನಾಪ್!

ಇಂದು ಯಲಹಂಕ ಪೊಲೀಸ್ ಠಾಣೆ, ಯಲಹಂಕ ಉಪನಗರ, ರಾಜಾನುಕುಂಟೆ, ಸೋಲದೇವನಹಳ್ಳಿ ಮತ್ತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗಳ ಬಳಿ ನೂರಾರು, ಸಾವಿರಾರು ಜನ ಕಾರ್ಯಕರ್ತರು ಜಮಾವಣೆಯಾಗಿ ಮುನೇಗೌಡರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಷಡ್ಯಂತ್ರ ಮಾಡಿ ಎಸ್.ಆರ್ ವಿಶ್ವನಾಥರನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುವುದು ಜೆಡಿಎಸ್ ಮುನೇಗೌಡರ ಹುನ್ನಾರವಾಗಿತ್ತು. ಇದೀಗ ಯಲಹಂಕ ಕ್ಷೇತ್ರದಾದ್ಯಂತ ಈ ವಿಡಿಯೋ ಪರಿಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಚುನಾವಣೆ ಸಮೀಸುತ್ತಿರುವುದರಿಂದ ಕ್ಷೇತ್ರದಲ್ಲಿ ಅಹಿತಕರ ವಾತಾವರಣ ಸೃಷ್ಟಿಸಿ ಮತಗಳಿಸಬೇಕೆಂಬ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ತಂತ್ರಗಾರಿಕೆ ನಡೆಯುವುದಿಲ್ಲ. ಷಡ್ಯಂತ್ರದ ವಿಡಿಯೋ ಬಗ್ಗೆ ರಾಜಾನುಕುಂಟೆ ಪೊಲೀಸರಿಗೆ ಇಂದು ವಿಶ್ವನಾಥ್ ದೂರು ನೀಡಿದ್ದಾರೆ. ಪೊಲೀಸರು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಎಸ್.ಆರ್ ವಿಶ್ವನಾಥ್ ಮಾಧ್ಯಮಗಳಿಗೆ ತಿಳಿಸಿದರು.

ಈಶಾನ್ಯ ವಿಭಾಗದ ಡಿಸಿಪಿ ಹೇಳೋದೇನು?

ಬಿಜೆಪಿ ಕಾರ್ಯಕರ್ತರಿಂದ ಯಲಹಂಕ ನ್ಯೂಟ್ ಟೌನ್ ಠಾಣೆಗೆ ‌ದೂರು ಬಂದಿದ್ದ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ “ಕಿಡ್ನಾಪ್ ಪ್ಲಾನ್ ಸಂಬಂಧ ಬಿಜೆಪಿ ಕಾರ್ಯಕರ್ತರು ಯಲಹಂಕ ನ್ಯೂ ಟೌನ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಅರ್ಜಿಯನ್ನ ಸ್ವೀಕರಿಸಿದ್ದೇವೆ. ಅದು ಕಾಗ್ನಿಜಿಬಲ್ ಅನ್ಸಿದ್ರೆ ಎಫ್ಐಆರ್ ಹಾಕ್ತೀವಿ. ಸದ್ಯ ಅರ್ಜಿ ಸಂಬಂಧ ತನಿಖೆ ನಡೆಸಲಾಗ್ತಿದೆ” ಎಂದು ಹೇಳಿದ್ದಾರೆ.

Latest Posts

ಲೈಫ್‌ಸ್ಟೈಲ್