ಬಿಟ್ ಕಾಯಿನ್ ಬಗ್ಗೆ ಕೇಳುತ್ತಿದ್ದಂತೆ ಸಿಡಿಮಿಡಿಗೊಂಡ ಸಿಎಂ ಬೊಮ್ಮಾಯಿ‌

Basavaraj Bommai
Published on

ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ಈಗಾಗಲೇ ಏನೋ ಹೇಳಬೇಕೋ ಅದನ್ನು ಹೇಳಿದ್ದೇನೆ. ಒಂದೇ ವಿಷಯವನ್ನ ನೀವು (ಮಾಧ್ಯಮದವರು) ಎಷ್ಟು ಬಾರಿ ಕೇಳುತ್ತೀರಿ? ನನಗೆ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಿಡಿಮಿಡಿಗೊಂಡರು.

ತಿರುಪತಿ ಪ್ರವಾಸದಿಂದ ಸೋಮವಾರ ಹಿಂತಿರುಗಿದ ಬಳಿಕ ಆರ್​ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತಿದ್ದ ವೇಳೆ ಬಿಟ್ ಕಾಯಿನ್ ಪ್ರಕರಣ ಪ್ರಸ್ತಾಪವಾಯಿತು.

ಇಲ್ಲದ ವಿಚಾರವನ್ನು ಅವರು‌ (ಕಾಂಗ್ರೆಸ್) ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಹುರುಳಿಲ್ಲದ ಆರೋಪ ಹೊರಿಸಿ ರಾಜಕೀಯ ಮಾಡುತ್ತಿದ್ದಾರೆ. ಏನಾದರೂ ದಾಖಲೆಗಳಿದ್ದರೆ ಕೊಡಿ, ಇಡಿ ತನಿಖೆ ನಡೆಸುತ್ತದೆ. ಯಾರನ್ನು ರಕ್ಷಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿರುವೆ ಎಂದು ಸಿಎಂ ಹೇಳಿದರು.

ಪ್ರಕರಣದಲ್ಲಿ ಯಾವುದೇ ಕಥೆ ಕಟ್ಟಿಲ್ಲ, ಅಂತಹ‌ ಪ್ರಶ್ನೆಯೇ ಉದ್ಭವಿಸದು. ಸರ್ಕಾರದ ನಿಲುವು ದೃಢವಾಗಿದೆ ಎಂದು ಬೊಮ್ಮಾಯಿ‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net