More

    ನಾಟಿ ಸ್ಟೈಲ್​ ಹಾಡಿಗೆ ಬಿರಾದಾರ್​ ಡ್ಯಾನ್ಸ್​ …

    ಬೆಂಗಳೂರು: ಹಾಸ್ಯ ನಟ ವೈಜನಾಥ್ ಬಿರಾದಾರ್​ ‘ನೈಂಟಿ ಹೊಡಿ ಮನೀಗ್​ ನಡಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಅದು ಅವರ ಅಭಿನಯದ 500ನೇ ಚಿತ್ರ ಎಂಬುದು ಸಹ ನೆನಪಿರಬಹುದು. ಈಗ ಈ ಸಿನಿಮಾಗೆ ಒಂದು ಪಕ್ಕಾ ನಾಟೀ ಸ್ಟೈಲ್​ ಹಾಡನ್ನು ಚಿತ್ರೀಕರಿಸಲಾಗಿದೆ.

    ನಾಟಿ ಸ್ಟೈಲ್​ ಹಾಡಿಗೆ ಬಿರಾದಾರ್​ ಡ್ಯಾನ್ಸ್​ ...

    ಇದನ್ನೂ ಓದಿ: ರಶ್ಮಿಕಾ ಈಗ ಅತಿಥಿ ಸಂಪಾದಕಿ : ರಾಮ್​ಚರಣ್ ತೇಜ ಪತ್ನಿಗೆ ಸಾಥ್

    ಬೆಂಗಳೂರಿನ ಬಿಡದಿ ಸಮೀಪದ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಚಿತ್ರಕ್ಕಾಗಿಯೇ ಇತ್ತೀಚೆಗೆ ‘ಸಿಂಗಲ್ ಕಣ್ಣಾ ಹಾರಸ್ತಿ … ಡಬ್ಬಲ್ ಹಾರ್ನಾ ಬಾರಸ್ತಿ …’ ಎಂಬ ಉತ್ತರ ಕರ್ನಾಟಕದ ನಾಟೀ ಸ್ಟೈಲಿನ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಈ ಹಾಡಿನಲ್ಲಿ ಎಪ್ಪತ್ತರ ವಯಸ್ಸಿನ ಬಿರಾದಾರ್ ಇಪ್ಪತ್ತರ ಹುಡುಗರೂ ನಾಚುವಂತೆ ಸ್ಟೆಪ್ ಹಾಕಿದ್ದಾರಂತೆ. ಅವರ ಜತೆಗೆ ನಟಿ ನೀತಾ ಸಹ ಹೆಜ್ಜೆ ಹಾಕಿದ್ದಾರೆ.

    ಉತ್ತರ ಕರ್ನಾಟಕ ಭಾಷಾ ಶೈಲಿಯ ‘ಸಿಂಗಲ್ ಕಣ್ಣಾ ಹಾರಸ್ತಿ‌‌ … ಡಬ್ಬಲ್ ಹಾರ್ನಾ ಬಾರಸ್ತಿ‌‌ …’ ಗೀತೆಗೆ ‘ಚುಟು-ಚುಟು’ ಖ್ಯಾತಿಯ ಭೂಷಣ್ ಅಷ್ಟೇ ವಿಶೇಷವಾಗಿ ದೃಶ್ಯ ರೂಪ ಕಟ್ಟಿ ಕೊಟ್ಟಿದ್ದಾರೆ. ಇನ್ನು, ‘ಚುಟು ಚುಟು’ ಖ್ಯಾತಿಯ ಸಾಹಿತಿ ಶಿವು ಭೇರಗಿ ಸಾಹಿತ್ಯ ಬರೆದು ರಾಗ ಸಂಯೋಜಿಸಿದರೆ, ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರಗಾಂವಿ ಈ ಹಾಡಿಗೆ ಧ್ವನಿಯಾಗಿದ್ದಾರೆ.

    ಬಾಗಲಕೋಟೆಯ ಅಮ್ಮಾ ಟಾಕೀಸ್ ಲಾಂಛನದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದು, ರತ್ನಮಾಲಾ ಬಾದರದಿನ್ನಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಡಿಸೆಂಬರ್​ ಒಳಗೆ ಕುಂಬಳಕಾಯಿ ಒಡೆಯಲಾಗುತ್ತದೆ.

    ಇದನ್ನೂ ಓದಿ: ಕಲರ್ಸ್ ಕನ್ನಡದಲ್ಲಿ ಬಾಹುಬಲಿ: ನ. 15ರ ಸಂಜೆ 4.30ಕ್ಕೆ ಪ್ರಸಾರ

    ವೈಜನಾಥ ಬಿರಾದಾರ್​ ಜತೆಗೆ ಕರಿಸುಬ್ಬು, ಮಾಣಿಕ್ಯ ಧರ್ಮ, ಪ್ರಶಾಂತ್ ಸಿದ್ದಿ, ಅಭಯ್ ವೀರ್, ನೀತಾ, ಪ್ರೀತು ಪೂಜಾ, ಆರ್.ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ.

    ವೀಕ್ಷಣೆಯಲ್ಲಿ ‘ದಿಲ್​ ಬೇಚಾರಾ’ ದಾಖಲೆಯನ್ನು ಮುರಿದ ‘ಲಕ್ಷ್ಮೀ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts