More

    ವೀಕ್ಷಣೆಯಲ್ಲಿ ‘ದಿಲ್​ ಬೇಚಾರಾ’ ದಾಖಲೆಯನ್ನು ಮುರಿದ ‘ಲಕ್ಷ್ಮೀ’

    ಮುಂಬೈ: ಎರಡು ದಿನಗಳ ಹಿಂದಷ್ಟೇ ಡಿಸ್ನಿ ಹಾಟ್​ಸ್ಟಾರ್​ ಓಟಿಟಿಯಲ್ಲಿ ಬಿಡುಗಡೆಯಾದ ಅಕ್ಷಯ್​ ಕುಮಾರ್​ ಅಭಿನಯದ ‘ಲಕ್ಷ್ಮೀ’ ಚಿತ್ರವನ್ನು ನೋಡಿದವರು ಚಿತ್ರ ಅಷ್ಟೇನೂ ಚೆನ್ನಾಗಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಆ ಚಿತ್ರ ಸದ್ದಿಲ್ಲದೆ ಹೊಸ ದಾಖಲೆಯನ್ನೇ ಮಾಡಿದೆ.

    ಓವರ್​ ದಿ ಟಾಪ್​ (ಓಟಿಟಿ)ಯಲ್ಲಿ ಬಿಡುಗಡೆಯಾಗಿ ಒಂದೇ ದಿನದಲ್ಲಿ ಅತೀ ಹೆಚ್ಚು ವೀಕ್ಷಣೆಗೆ ಒಳಗಾದ ಚಿತ್ರ ಎಂಬ ಹೆಗ್ಗಳಿಕೆಗೆ ಇದೀಗ ‘ಲಕ್ಷ್ಮೀ’ ಚಿತ್ರ ಪಾತ್ರವಾಗುವುದಕ್ಕೆ ಹಳೆಯ ದಾಖಲೆಯನ್ನು ಮುರಿದಿದೆ.

    ಇದನ್ನೂ ಓದಿ: ಕಲರ್ಸ್ ಕನ್ನಡದಲ್ಲಿ ಬಾಹುಬಲಿ: ನ. 15ರ ಸಂಜೆ 4.30ಕ್ಕೆ ಪ್ರಸಾರ

    ಇದಕ್ಕೂ ಮುನ್ನ ಸುಶಾಂತ್​ ಸಿಂಗ್​ ರಜಪೂತ್​ ಅಭಿನಯದ ಕೊನೆಯ ಚಿತ್ರ ‘ದಿಲ್​ ಬೇಚಾರಾ’, ಅದೇ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಒಂದೇ ದಿನದಲ್ಲಿ ಜಗತ್ತಿನಾದ್ಯಂತ 9.5 ಕೋಟಿ ವೀಕ್ಷಣೆ ಪಡೆದಿತ್ತು. ಒಂದೇ ದಿನದಲ್ಲಿ ಅತೀ ಹೆಚ್ಚು ಜನರಿಂದ ವೀಕ್ಷಣೆಗೊಳಗಾದ ಚಿತ್ರ ಎಂಬ ಖ್ಯಾತಿ ಪಡೆದಿತ್ತು.

    ಇದೀಗ ಆ ದಾಖಲೆಯನ್ನು ಮುರಿದಿರುವ ‘ಲಕ್ಷ್ಮೀ’, ಒಂದೇ ದಿನದಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಗಾಗಿದೆ. ‘ದಿಲ್​ ಬೇಚಾರಾ’ ಚಿತ್ರವನ್ನೇನೋ 9.5 ಕೋಟಿ ಜನ ವೀಕ್ಷಿಸಿದ್ದರು. ‘ಲಕ್ಷ್ಮೀ’ ಚಿತ್ರವನ್ನು ಎಷ್ಟು ಜನ ವೀಕ್ಷಿಸಿದ್ದರು ಎಂಬ ನಿಖರ ಮಾಹಿತಿ ಇಲ್ಲದಿದ್ದರೂ, ಆ ಚಿತ್ರ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೆಚ್ಚು ವೀಕ್ಷಣೆಗೆ ಒಳಗಾಗಿದೆ ಎಂದು ಸ್ವತಃ ಡಿಸ್ನಿಹಾಟ್​ಸ್ಟಾರ್​ ಸಂಸ್ಥೆಯು ಸೋಷಿಯಲ್​ ಮೀಡಿಯಾದಲ್ಲಿ ಘೋಷಿಸಿದೆ.

    ಇದನ್ನೂ ಓದಿ: ಸೈಕಲಾಜಿಕಲ್​ ಕೈಮರ … ಒಂದೇ ಚಿತ್ರದಲ್ಲಿ ಪ್ರಿಯಾಮಣಿ ಮತ್ತು ಪ್ರಿಯಾಂಕಾ ಉಪೇಂದ್ರ

    ಒಂದೇ ವ್ಯತ್ಯಾಸವೆಂದರೆ, ‘ದಿಲ್​ ಬೇಚಾರಾ’ ಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲಾಗಿತ್ತು. ಆದರೆ, ‘ಲಕ್ಷ್ಮೀ’ ಚಿತ್ರವು ಡಿಸ್ನಿ ಹಾಟ್​ಸ್ಟಾರ್​ ವಿಐಪಿಯಲ್ಲಿ ಪ್ರದರ್ಶನವಾಗುತ್ತಿದ್ದು, ಅದನ್ನು ನೋಡಬೇಕೆಂದರೆ, ಚಂದಾದಾರಾಗಬೇಕಿದೆ.

    ‘ಲಕ್ಷ್ಮೀ’ ಚಿತ್ರವು ತಮಿಳಿನ ‘ಕಾಂಚನಾ’ ಚಿತ್ರದ ರೀಮೇಕ್​ ಆಗಿದ್ದು, ಮೂಲ ಚಿತ್ರವನ್ನು ನಿರ್ದೇಶಿಸಿದ್ದ ರಾಘವ ಲಾರೆನ್ಸ್​ ಅವರೇ ಈ ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಇನ್ನು ಅಕ್ಷಯ್​ ಕುಮಾರ್​ ಜತೆಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದು, ಚಿತ್ರ ನವೆಂಬರ್​ ಒಂಬತ್ತರಂದು ಬಿಡುಗಡೆಯಾಗಿದೆ.

    ರಶ್ಮಿಕಾ ಈಗ ಅತಿಥಿ ಸಂಪಾದಕಿ : ರಾಮ್​ಚರಣ್ ತೇಜ ಪತ್ನಿಗೆ ಸಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts