ನದಿಗಳಲ್ಲಿ ಜೀವ ವೈವಿಧ್ಯಗಳನ್ನು ಬೆಳೆಸುವ ಕಾರ್ಯ

Mul_Biodiversity
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಅಳಿವಿನ ಅಂಚಿನಲ್ಲಿರುವ ಮೀನುಗಳ ಮರಿಗಳನ್ನು ಬೆಳೆಸಿ ನದಿ ನೀರಿಗೆ ಸೇರಿಸುವ ಮೂಲಕ ನದಿಗಳಲ್ಲಿ ಜೀವ ವೈವಿಧ್ಯಗಳನ್ನು ಬೆಳೆಸುವ ಕಾರ್ಯ ಮೀನುಗಾರಿಕಾ ಇಲಾಖೆಯಿಂದ ನಡೆಯುತ್ತಿದೆ ಎಂದು ಶಾಸಕ ಉವಾನಾಥ ಎ.ಕೋಟ್ಯಾನ್ ಹೇಳಿದರು.

ರಾಜ್ಯ ಮೀನುಗಾರಿಕಾ ಇಲಾಖೆಯಿಂದ ನಾಲ್ಕೂವರೆ ತಿಂಗಳು ಸಾಕಿ ಸಲಹಿದ ತಲಾ 15 ಗ್ರಾಂ ತೂಕದ ಮುಡಾವು(ಕುರುಡಿ) ಮೀನು ಮರಿಗಳನ್ನು ಮೂಲ್ಕಿಯ ಬಪ್ಪನಾಡು ಬಡಗುಹಿತ್ಲುವಿನ ಶಾಂಭವಿ ಹೊಳೆಯ ಜಳಕದ ಕಟ್ಟೆ ಬಳಿ ಶಾಂಭವಿ ಹೊಳೆಗೆ ಬಿಡುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದಯ್ಯ ವಾಹಿತಿ ನೀಡಿ, ಪ್ರತಿ ವರ್ಷ ಮೀನುಗಾರಿಕಾ ಇಲಾಖೆ ವತಿಯಿಂದ ವಿವಿಧ ಜಾತಿಯ ಬೆಲೆ ಬಾಳುವ ಮೀನು ಮರಿಗಳನ್ನು ಹೊಳೆ ಮತ್ತು ನದಿಗಳಿಗೆ ಬಿಡಲಾಗುತ್ತಿದ್ದು, ಮೀನಿನ ಸಂತತಿ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತಿದೆ. ಸಮುದ್ರ ಸೇರುವ ನದಿಗಳಲ್ಲಿ ಮುಡಾವು ಮೀನುಗಳು ಸ್ವಚ್ಛಂದವಾಗಿ ವಿಹರಿಸಿ 10 ಕೆ.ಜಿ. ತೂಕದವರೆಗೂ ಬೆಳೆಯುತ್ತವೆ. ಒಟ್ಟು 40 ಸಾವಿರ ಮೀನು ಮರಿಗಳನ್ನು ಮೀನುಗಾರಿಕಾ ಇಲಾಖೆಯವರು ತಂದಿದ್ದು, ಮೂಲ್ಕಿಯಲ್ಲಿ 15 ಸಾವಿರ ಮೀನು ಮರಿಗಳನ್ನು ಹೊಳೆಗೆ ಬಿಡಲಾಯಿತು. ಮಂಗಳೂರಿನ ಬಂಗ್ರಕೂಳೂರು ಮತ್ತು ಬಜಾಲ್ ಬಳಿ ನದಿಗೆ ಮೀನು ಮರಿಗಳನ್ನು ಬಿಡಲಾಗಿದೆ ಎಂದರು.

ಡಿ.ಡಿ. ದಿಲೀಪ್ ಕುವಾರ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಪೂರ್ವಾಧ್ಯಕ್ಷರಾದ ಸುನೀಲ್ ಆಳ್ವ, ಸುಭಾಷ್ ಶೆಟ್ಟಿ, ಸದಸ್ಯೆ ದಯಾವತಿ ಅರುಣ್ ಅಂಚನ್, ಪ್ರಮುಖರಾದ ಕಮಲಾಕ್ಷ ಬಡಗುಹಿತ್ಲು, ಪುರುಷೋತ್ತಮ ರಾವ್, ನೀಲಾಧರ್ ಬಡಗುಹಿತ್ಲು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net