ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿಹೋದ ಬೈಕ್ ಸವಾರ!

Untitled design - 2023-07-28T102302.498
Published on

ತೆಲಂಗಾಣ: ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸೇತುವೆ ದಾಟಲು ಯತ್ನಿಸಿದ ವ್ಯಕ್ತಿಯೊಬ್ಬ ಬೈಕ್ ಸಮೇತ ಕೊಚ್ಚಿಕೊಂಡು ಹೋದ ಘಟನೆ ತೆಲಂಗಾಣದ ಹನುಮಕೊಂಡದಲ್ಲಿ ವರದಿಯಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡಿದ್ದು, ಸೇತುವೆ ದಾಟಲು ಮಹೇಂದರ್ ಎಂಬ ಬೈಕ್​ ಸವಾರ ಕೆಲ ಕಾಲ ದಡದಲ್ಲಿ ನಿಂತು ಚಿಂತಿಸಿದ್ದಾರೆ. ಬಳಿಕ ಮುಂದಾಗಲು ಹೋದಾಗ ಆಯಾತಪ್ಪಿ ಕನ್ನಾರಂ ಹೊಳೆಗೆ ಬಿದ್ದು, ಕೊಚ್ಚಿ ಹೋಗಿದ್ದಾರೆ. ಕೂಡಲೇ ಸ್ಥಳೀಯ ಮೀನುಗಾರರ ಸಹಾಯ ಪಡೆದು ಪೊಲೀಸರು ಮಹೇಂದರ್‌ ಅವರಿಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೈಕ್ ಮತ್ತು ಸವಾರ ಇಬ್ಬರು ಕೊಚ್ಚಿಹೋಗುತ್ತಿರುವ ದೃಶ್ಯದಲ್ಲಿ ಸೆರೆಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net