

ಬೆಂಗಳೂರು: ಬೈಕ್ ಅಪಘಾತದಲ್ಲಿ ಬಿಬಿಎಂಪಿ ಹೆಲ್ತ್ ಇನ್ಸ್ಪೆಕ್ಟರ್ ಪ್ರಶಾಂತ್ ನಾಯ್ಕ್ (27) ಮೃತಪಟ್ಟಿದ್ದಾರೆ.
ಜೆ.ಪಿ.ನಗರದಲ್ಲಿ ವಾಸವಿದ್ದ ಪ್ರಶಾಂತ್ ನಾಯ್ಕ್, ಸೋಮವಾರ ತಡರಾತ್ರಿ ಬೈಕ್ನಲ್ಲಿ ಸದಾಶಿವನಗರದಿಂದ ಜೆ.ಪಿ.ನಗರಕ್ಕೆ ತೆರಳುತ್ತಿದ್ದರು.
ಮಾರ್ಗಮಧ್ಯೆ ಸ್ಯಾಂಕಿಕೆರೆಯ ಟಿ.ಚೌಡಯ್ಯ ರಸ್ತೆಯ ಪುಟ್ಪಾತ್ಗೆ ಬೈಕ್ ಡಿಕ್ಕಿಯಾಗಿದ್ದು, ಕೆಳಗೆ ಬಿದ್ದ ಪ್ರಶಾಂತ್ರ ತಲೆಗೆ ಗಂಭೀರ ಪೆಟ್ಟಾಗಿ ಮೃತಪಟ್ಟಿದ್ದಾರೆ. ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.