ಪೂರ್ಣಿಯಾ ವಿಚಾರಣಾಧೀನ ಕೈದಿ ಸಾವಿಗೆ ಟ್ವಿಸ್ಟ್​..ಪೊಲೀಸರೆದುರೇ ಸ್ನೇಹಿತರಿಂದ ವಿಷ!

crime
Published on

ಪಾಟ್ನಾ: ಬಿಹಾರದ ಪೂರ್ಣಿಯಾದಲ್ಲಿ ವಿಚಾರಣಾಧೀನ ಕೈದಿ ವಿವೇಕ್ ಕುಮಾರ್ ಅಲಿಯಾಸ್ ಲಾಲ್ ಯಾದವ್ (23) ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆಗೆ ಟ್ವಿಸ್ಟ್​ ಸಿಕ್ಕಿದೆ. ವಿಷ ಸೇವನೆಯಿಂದ ಅಸುನೀಗಿರುವುದಾಗಿ ಹೇಳಲಾಗುತ್ತಿದೆ.

ಮೃತ ಕೊಲೆ ಪ್ರಕರಣವೊಂದರಲ್ಲಿ ಕಳೆದ 5 ವರ್ಷಗಳಿಂದ ಅರಾರಿಯಾ ಜೈಲಿನಲ್ಲಿದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ಜೈಲಿನಿಂದ ಬಿಡುಗಡೆಯಾಗಲಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಸುಪಾಲ್ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಂತರ ಪೊಲೀಸರು ಆತನನ್ನು ಮಂಡಲ್ ಜೈಲಿಗೆ ಕರೆದೊಯ್ಯುತ್ತಿದ್ದಾಗ ಆತನ ಕುಟುಂಬಸ್ಥರು ಹಾಗೂ ಸ್ನೇಹಿತರು ಕೋರ್ಟ್ ಆವರಣಕ್ಕೆ ಬಂದಿದ್ದಾರೆ. ಆಗ ಪೊಲೀಸರ ಅನುಮತಿ ಪಡೆದು ವಿವೇಕ್ ಎಲ್ಲರನ್ನೂ ಮಾತನಾಡಿಸಿದ್ದು, ಗೆಳೆಯರು ವಿವೇಕ್ ಗೆ ಕೂಲ್ ಡ್ರಿಂಕ್ ಕೊಟ್ಟು ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸ್ ವಾಹನ ಹತ್ತಿ ಆ ಕೂಲ್ ಡ್ರಿಂಕ್ ಕುಡಿದ ವಿವೇಕ್ ಏಕಾಏಕಿ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದೊಯ್ದು ನೋಡಿದಾಗ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು.

ಆದರೆ ಪೊಲೀಸ್ ಕಸ್ಟಡಿಯಲ್ಲಿದ್ದ ಕೈದಿ ಸಾವನ್ನಪ್ಪಿದ್ದು ಇದೀಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಮೃತನ ಸಂಬಂಧಿಕರು ವಿವೇಕ್ ನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಸ್ನೇಹಿತರು ಕೊಟ್ಟ ಕೂಲ್ ಡ್ರಿಂಕ್ ನಲ್ಲಿ ವಿಷ ಬೆರೆಸಲಾಗಿದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲಿಯವರೆಗೂ ಆರೋಗ್ಯವಾಗಿದ್ದೇನೆ ಎಂದಿದ್ದರು.. ಕೂಲ್ ಡ್ರಿಂಕ್ ಕುಡಿದು ಪ್ರಾಣ ಕಳೆದುಕೊಂಡರು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net