ಮೊದಲು ಮತದಾನ..ನಂತರ ತಾಯಿಯ ಅಂತಿಮ ಸಂಸ್ಕಾರ!

election
Published on

ಪಾಟನಾ: ಲೋಕಸಭೆ ಚುನಾವಣೆ ಅಂತಿಮ ಹಂತದ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲೇ ಹೆತ್ತತಾಯಿ ಮೃತಪಟ್ಟಿದ್ದಾರೆ. ಆದರೆ ಆ ಕುಟುಂಬ ದುಃಖದಲ್ಲೂ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದೆ. ಬಳಿಕ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಘಟನೆ ಶನಿವಾರ ಅಂದರೆ ಜೂನ್ 1 ರಂದು ಬಿಹಾರದ ಜೆಹಾನಾಬಾದ್ ಲೋಕಸಭಾ ಕ್ಷೇತ್ರದ ದೇವ್ಕುಲಿ ಗ್ರಾಮದಲ್ಲಿ ನಡೆದಿದೆ.

ಘಟನೆ ಕುರಿತು ಮೃತ ಮಹಿಳೆ ಪುತ್ರ ಮಿಥಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದಾರೆ. ಶನಿವಾರ ಬೆಳಗ್ಗೆ ಅವರ ನಮ್ಮ ತಾಯಿ ಮೃತಪಟ್ಟರು. ಆಕೆಗೆ 80 ವರ್ಷವಾಗಿತ್ತು. ಆಕೆ ಮತ್ತೆ ಹಿಂತಿರುಗುವುದಿಲ್ಲ. ಅಂತ್ಯಕ್ರಿಯೆಯನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಬಹುದು. ಮತ್ತೆ ಚುನಾವಣೆ ಬರುವುದಿಲ್ಲ. ಅದು ಐದು ವರ್ಷಗಳಿಗೊಮ್ಮೆ ಮಾತ್ರ ಬರುತ್ತದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರೆಲ್ಲ ಕುಳಿತು ಮತದಾನದ ವಿಚಾರವಾಗಿ ಚರ್ಚಿಸಿದೆವು. ಮೊದಲು ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ನಂತರ ತಾಯಿಯ ಅಂತಿಮ ವಿಧಿವಿಧಾನ ನೆರವೇರಿಸಲು ನಿರ್ಧರಿಸಿದೆವು ಎಂದು ಯಾದವ್ ತಿಳಿಸಿದರು.

ಕುಟುಂಬದ ಸದಸ್ಯರೆಲ್ಲರೂ ಮತ ಹಾಕಿದ ಬಳಿಕ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದೇವೆ ಎಂದು ಮಿಥಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯ ಅಂತಿಮ ಹಂತದ ಮತದಾನ ಶನಿವಾರ ನಡೆಯಿತು. ಬಿಹಾರದ ಎಂಟು ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net