ಹೆಂಡ್ತಿನ ಹೊತ್ತು ನದಿ ದಾಟಿದ ಗಂಡ! ನವ ವಿವಾಹಿತನ ವಿಡಿಯೋ ವೈರಲ್

doni
Published on

ಪಟನಾ: ಮಳೆಗಾಲ ಆರಂಭವಾಗಿದೆ. ಅನೇಕ ಕೆರೆ ಕಟ್ಟೆಗಳು ತುಂಬಿವೆ ಕೂಡ. ಹೀಗಿರುವಾಗ ಈಗಷ್ಟೇ ತನ್ನ ಬಾಳಿಗೆ ಎಂಟ್ರಿ ಕೊಟ್ಟಿರುವ ಹೆಂಡತಿಯ ಸೀರೆ ಒದ್ದೆಯಾಗಬಾರದು ಎಂದು ನವವಿವಾಹಿತನೊಬ್ಬ ಹೆಂಡತಿಯನ್ನು ಹೊತ್ತು ನೀರು ದಾಟಿಸಿದ್ದು, ಆ ವಿಡಿಯೋ ಭಾರೀ ವೈರಲ್ ಆಗಿದೆ.

ಬಿಹಾರದಲ್ಲೂ ಮಳೆ ಹೆಚ್ಚಿರುವುದರಿಂದಾಗಿ ಅಲ್ಲಿನ ಕೆರೆ, ಹಳ್ಳಗಳೆಲ್ಲ ನೀರನಿಂದ ಭರ್ತಿಯಾಗಿವೆ. ಅಲ್ಲಿನ ಜನರು ಸಂಚಾರಕ್ಕೆ ದೋಣಿ ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ ಪ್ರಖಂಡ ಕ್ಷೇತ್ರದ ಲೋಹಾಗಢಾ ಗ್ರಾಮದ ಯುವಕನೊಬ್ಬ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಕಳೆದ ಶನಿವಾರದಂದು ಆತ ಪಕ್ಕದ ಊರಿನ ಯುವತಿಯನ್ನು ವರಿಸಿದ್ದಾನೆ.

ಮದುವೆಯಾಗಿ ವಧುವನ್ನು ವರನ ಊರಿಗೆ ಕರೆದುಕೊಂಡು ಬರುವಾಗ ದೋಣಿಯಲ್ಲೇ ಕರೆದುಕೊಂಡು ಬರಲಾಗಿದೆ. ದೋಣಿ ಇಳಿದ ನಂತರ ಕೊಂಚವೂ ನೀರು ಕಾಲಿಗೆ ತಾಗದಂತೆ ನಡೆದುಹೋಗುತ್ತೇವೆಂದರೆ ಅದು ಸುಳ್ಳು. ಮದುವೆಗೆಂದು ತೊಟ್ಟಿದ್ದ ಹೊಸ ಸೀರೆ ನೀರಿನಲ್ಲಿ ಒದ್ದೆಯಾಗುತ್ತದೆಯಲ್ಲ ಎಂದು ಯೋಚಿಸುತ್ತ ದೋಣಿ ಇಳಿಯಲು ಪ್ರಯತ್ನಿಸುತ್ತಿದ್ದ ವಧುವನ್ನು ವರ ಹೆಗಲ ಮೇಲೆ ಹೊತ್ತು ನೀರು ದಾಟಿಸಿ ಬಿಟ್ಟಿದ್ದಾನೆ. ಇದನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಕತ್ ವೈರಲ್ ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net