ಅಂತೂ ಬಂತು ಬಿಹಾರ ಮುಖ್ಯಮಂತ್ರಿ ಕರೊನಾ ರಿಸಲ್ಟ್‌

bihar C
Published on

ಪಟ್ನಾ: ಕರೊನಾ ಸೋಂಕು ತಗುಲಿದ್ದ ಬಿಹಾರ ವಿಧಾನ ಪರಿಷತ್ ಸಭಾಪತಿ ಅವಧೇಶ್ ನಾರಾಯಣ್ ಅವರ ಜತೆ ವೇದಿಕೆ ಹಂಚಿಕೊಂಡಿದ್ದ ಕಾರಣ ಕಂಗೆಟ್ಟಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕರೊನಾ ಫಲಿತಾಂಶ ಹೊರಬಂದಿದೆ.

ಇವರ ಫಲಿತಾಂಶದಲ್ಲಿ ಸೋಂಕು ಇಲ್ಲ ಎಂದು ಪತ್ತೆಯಾಗಿದ್ದು, ಮುಖ್ಯಮಂತ್ರಿ ಈಗ ನಿರಾಳರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅವಧೇಶ್ ನಾರಾಯಣ್ ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಅಧಿಕಾರಿಗಳು, ಗಣ್ಯರಲ್ಲೂ ಸೋಂಕು ಭೀತಿ ಇದ್ದ ಹಿನ್ನೆಲೆಯಲ್ಲಿ ಎಲ್ಲರನ್ನೂ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮುಖ್ಯಮಂತ್ರಿಗಳ ಫಲಿತಾಂಶ ಹೊರಬಂದಿದ್ದು, ಉಳಿದವರ ವರದಿಯಾಗಿ ಕಾಯಲಾಗುತ್ತಿದೆ.

ನಿತೀಶ್‌ ಕುಮಾರ್‌ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಕಚೇರಿಗೆ ಭೇಟಿ ನೀಡುವ ಅಧಿಕಾರಿಗಳು ಹಾಗೂ ಗಣ್ಯರನ್ನು ಸ್ಕ್ರೀನಿಂಗ್‌ಗೆ ಗುರಿಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net