ಇದೇನು ಬಾಯೋ ಬೊಂಬಾಯೋ?! ವಿಶ್ವದ ಅತ್ಯಂತ ದೊಡ್ಡ ಬಾಯಿ ಇರುವ ಮಹಿಳೆ ಇವಳು..

blank

ವಾಷಿಂಗ್ಟನ್: ಮನುಷ್ಯನ ದೇಹದಲ್ಲಿ ಏನೇ ಸಣ್ಣ ದೋಷವಿದ್ದರೂ ಅದರ ಬಗ್ಗೆ ಆಡಿಕೊಳ್ಳೋದಕ್ಕೆ ಸಾಕಷ್ಟು ಜನರಿರುತ್ತಾರೆ. ಅದೇ ರೀತಿ ದೊಡ್ಡ ಬಾಯಿ ಇದೆ ಎನ್ನುವ ಕಾರಣಕ್ಕೆ ಎಲ್ಲರಿಂದ ಹೀಯಾಳಿಸಿಕೊಂಡಿದ್ದ ಮಹಿಳೆಯೊಬ್ಬಳು ಇದೀಗ ಗಿನ್ನೆಸ್ ರೆಕಾರ್ಡ್​ನಲ್ಲಿ ಹೆಸರು ದಾಖಲಿಸಿದ್ದಾಳೆ.

ಅಮೆರಿಕದ ಟಿಕ್​​ಟಾಕ್ ಸ್ಟಾರ್ ಸಮಂತಾ ರಾಮ್‌ಸ್ಡೆಲ್(31) ಈ ರೀತಿ ದಾಖಲೆ ಬರೆದಿರುವ ಮಹಿಳೆ. ಆಕೆ ಬೋರ್ ಆಗುತ್ತಿದೆ ಎನ್ನುವ ಕಾರಣಕ್ಕೆ ಟಿಕ್​ಟಾಕ್ ಡೌನ್​ಲೋಡ್ ಮಾಡಿಕೊಂಡು ಅದರಲ್ಲಿ ವಿಡಿಯೋ ನೋಡಲಾರಂಭಿಸಿದಳಂತೆ. ಅದಾದ ಮೇಲೇ ತಾನೂ ಏಕೆ ವಿಡಿಯೋ ಮಾಡಬಾರದೆಂದು ವಿಡಿಯೋ ಮಾಡಲಾರಂಭಿಸಿದಳು. ಅದರಲ್ಲಿ ಆಕೆಯ ದೊಡ್ಡ ಬಾಯಿ ನೋಡಿ ಎಲ್ಲರೂ ಆಕೆಯನ್ನು ಮೆಚ್ಚಿಕೊಳ್ಳಲಾರಂಭಿಸಿದರಂತೆ.

ಹಾಗೆಯೇ ವಿಡಿಯೋ ಮಾಡುತ್ತಾ ಮಾಡುತ್ತಾ ಆಕೆಯ ದೊಡ್ಡ ಬಾಯಿ ಎಲ್ಲ ಕಡೆ ಫೇಮಸ್ ಆಗತೊಡಗಿತು. ದೊಡ್ಡ ಬಾಯಿಯಿರುವ ನೀನು ಗಿನ್ನೆಸ್ ರೆಕಾರ್ಡ್​ಗೆ ಪ್ರಯತ್ನ ಮಾಡು ಎಂದು ಆಕೆಯ ಸ್ನೇಹಿತರೆಲ್ಲರೂ ಅವಳಿಗೆ ಹುರಿದುಂಬಿಸಿದರು. ಅದರಂತೆ ಆಕೆ ಗಿನ್ನೆಸ್ ರೆಕಾರ್ಡ್​ಗೆ ಪ್ರಯತ್ನ ಪಟ್ಟಿದ್ದಾಳೆ.

ಗಿನ್ನೆಸ್ ರೆಕಾರ್ಡ್​ಗೆಂದು ಆಕೆಯ ಬಾಯಿಯನ್ನು ಪೂರ್ತಿಯಾಗಿ ತೆಗೆದು ಅಳತೆ ಮಾಡಲಾಗಿದೆ. ಆಕೆಯ ಬಾಯಿ ಬರೋಬ್ಬರಿ 2.56 ಇಂಚು ಅಂದರೆ 6.52 ಸೆಂ.ಮೀ ಇದೆ. ಪೂರ್ತಿ ಸೇಬುಹಣ್ಣನ್ನು ಆಕೆ ಬಾಯಿಯೊಳಗೆ ಇಟ್ಟುಕೊಳ್ಳಬಹುದಂತೆ. ಪೂರ್ತಿ ವಿಶ್ವದಲ್ಲಿ ಅತಿ ದೊಡ್ಡ ಬಾಯಿ ಇರುವ ಮಹಿಳೆ ಆಕೆ ಎಂದು ಕರೆಯಲಾಗಿದೆ. ಹೀಯಾಳಿಕೆಯನ್ನೇ ಹಿರಿಮೆಗೆ ದಾರಿ ಮಾಡಿಕೊಳ್ಳುವುದು ಹೇಗೆ ಎಂದು ಆಕೆ ಜಗತ್ತಿಗೆ ತೋರಿಸಿಕೊಟ್ಟಿದ್ದಾಳೆ. (ಏಜೆನ್ಸೀಸ್)

ಭಗತ್ ಸಿಂಗ್​ನಂತೆ ನಟಿಸಲು ಹೋಗಿ ಸಾವನ್ನಪ್ಪಿದ ಬಾಲಕ! ಮನಕಲಕುವ ಘಟನೆಯಿದು

ಬಿಗ್​ಬಾಸ್​ನಲ್ಲಿ ಇಂದೇ ಎಲಿಮಿನೇಶನ್! ಮನೆಯಿಂದ ಹೊರಬಂದವರು ಇವರೇ ನೋಡಿ..

Share This Article

ಕೆಂಪು ಬಾಳೆಹಣ್ಣಿನ ಸೇವನೆಯಿಂದಾಗುವ ಅದ್ಭುತ ಪ್ರಯೋಜಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಕೆಂಪು ಬಾಳೆಹಣ್ಣು ಒಂದು ವಿಶಿಷ್ಟ ಮತ್ತು ಪೌಷ್ಟಿಕ ಹಣ್ಣು. ಇದು ಸಾಮಾನ್ಯ ಹಳದಿ ಬಾಳೆಹಣ್ಣಿಗಿಂತ ಹೆಚ್ಚು…

ಊಟ & ನಿದ್ರೆಯ ನಡುವಿನ ಅಂತರ ಎಷ್ಟಿರಬೇಕು?; ಇಲ್ಲಿದೆ ICMR ನೀಡಿರುವ ಸೂಚನೆ | Health Tips

ನಮ್ಮ ದಿನಚರಿಯ ಪ್ರಮುಖ ಭಾಗವೆಂದರೆ ಆಹಾರ ಸೇವಿಸುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು. ಆದರೆ ಜನರು…

ಬೇಸಿಗೆಯಲ್ಲಿ ಹಾಲಿನ ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ! ಈ ಚಹಾ ಟ್ರೈ ಮಾಡಿ.. Summer Morning Drinks

Summer Morning Drinks: ಬೇಸಿಗೆಯಾಗಿರಲಿ ಅಥವಾ ಚಳಿಗಾಲವಾಗಿರಲಿ, ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯಲು ಇಷ್ಟಪಡುತ್ತಾರೆ. …