

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 7ರ ವಿನ್ನರ್, ಕಿರುತೆರೆ ನಟ ಮತ್ತು ನಿರೂಪಕ ಶೈನ್ ಶೆಟ್ಟಿ ಈಗ ದುಬಾರಿ ಕಾರನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ನೀಲಿ ಬಣ್ಣದ BMW x1 ಕಾರನ್ನು ಖರೀದಿ ಮಾಡುವ ಮೂಲಕ ದುಬಾರಿ ಕಾರಿನ ಒಡೆಯರಾಗಿದ್ದಾರೆ. ಇದರ ಶೋರೂಂ ಬೆಲೆ 40 ಲಕ್ಷ ರೂ. ಎಂದು ಹೇಳಲಾಗುತ್ತಿದೆ. ಕಾರಿನ ಜೊತೆ ಶೈನ್ ಶೆಟ್ಟಿ ಹಾಗೂ ಅವರ ತಾಯಿ ಕ್ಕಿಕ್ಕಿಸಿರುವ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಮತ್ತು ಸ್ನೇಹಿತರು ಶುಭಾಶಯ ಕೋರಿದ್ದಾರೆ. ಕಳೆದ ವಾರವಷ್ಟೇ ಕಿರುತೆರೆ ನಟಿ ಮೇಘಾ ಶೆಟ್ಟಿ ಎರಡು ದುಬಾರಿ ಬೆಲೆಯ ಹೊಸ ಕಾರನ್ನು ಖರೀದಿ ಮಾಡಿ ಸುದ್ದಿಯಾಗಿದ್ದರು.
ಇನ್ನು ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ವೀಕ್ಷಕರ ಅದರಲ್ಲೂ ಮಹಿಳಾ ಅಭಿಮಾನಿಗಳ ನೆಚ್ಚಿನ ಸ್ಫರ್ಧಿಯಾಗಿದ್ದರು. ಬಿಗ್ಬಾಸ್ ಸ್ಪರ್ಧೆಯ 50 ಲಕ್ಷ ಹಣದ ಜೊತೆ ಕಾರನ್ನು ಸಹ ಗಿಫ್ಟ್ ಆಗಿ ಪಡೆದಿದ್ದರು. ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದಲ್ಲಿ ಶೈನ್ ಅಭಿನಯಿಸುತ್ತಿದ್ದಾರೆ.