More

    ವಾರದ ಪಂಚಾಯತಿ ವೇಳೆ ನಾನು ನಾನ್​​​ವೆಜ್​​ ತಿನ್ನಲ್ಲ ಎಂದ ಸಂಗೀತಾ; ತಿನ್ನದೇ ಇರೋಕೆ ಕೊಟ್ಟ ಕಾರಣ ಶಾಕಿಂಗ್​..!

    ಬಿಗ್​​ಬಾಸ್​​ ಮನೆಯಲ್ಲಿ ಇದೀಗ ಕಿಚ್ಚ ಸುದೀಪ್​​​ ಹೇಳಿದ ಸ್ಪರ್ಧಿಯೊಬ್ಬರ ವೋಟಿಂಗ್​ ವಿಚಾರವಾಗಿಯೇ ಚರ್ಚೆಗಳು ನಡೆಯುತ್ತಿವೆ. ಸಂಗೀತಾ ಅಥವಾ ಪ್ರತಾಪ್​​ ಈ ಬೃಹತ್​​​ ಸಂಖ್ಯೆಯ ವೋಟ್​​​ಗಳನ್ನೂ ತೆಗೆದುಕೊಂಡಿರ ಬಹುದು ಎಂದೂ ಹೇಳಲಾಗುತ್ತಿದೆ.


    ವಾರದ ಕಥೆ ಕಿಚ್ಚನ ಜತೆ ಪಂಚಾಯಿತಿ ಸಂದರ್ಭದಲ್ಲಿ ಕಿಚ್ಚ ಸುದೀಪ್​ ಸಂಗೀತಾಗೆ ಪ್ರಶ್ನೆಯೊಂದನ್ನು ಕೇಳಿದ್ದರು-“ನೀವು ನಾನ್ ವೆಜ್ ತಿನ್ನುತ್ತೀರಿ, ಆದ್ರೆ ಬಿಗ್ ಬಾಸ್ ಮನೆಯಲ್ಲಿ ಯಾಕೆ ತಿನ್ನಲ್ಲ?”
    ಸುದೀಪ್​ ಅವರ ಈ ಪ್ರಶ್ನೆಗೆ ಉತ್ತರಿಸಿದ ಸಂಗೀತಾ, “ನಾನು ನಾನ್ ವೆಜ್ ತಿನ್ನುತ್ತೇನೆ ಸರ್, ಆದರೆ ಇಲ್ಲಿ ತಿನ್ನಲ್ಲ ಎಂದು ಸಂಕಲ್ಪ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಟ್ರೋಫಿ ಎತ್ತಿಹಿಡಿದ ಮೇಲೆಯೇ ನಾನ್ ವೆಜ್ ತಿನ್ನೋ ಶಪಥ ಮಾಡಿದ್ದೀರಾ ಎಂದು ಕಿಚ್ಚ ಕೇಳಿದ್ದಾರೆ.
    ಬಿಗ್​​ಬಾಸ್​​ ಮನೆಯ ಹೊರಗೂ ಸಹ ಸಂಗೀತಾ ಪ್ರತಾಪ್​​ಗೆ ದೊಡ್ಡ ಮಟ್ಟಿನ ಫ್ಯಾನ್​​ ಫಾಲೋವಿಂಗ್​​ ಇದೆ. ಹಾಗಾಗಿಯೇ ಇವರಿಬ್ಬರಿಗೇ ಈ ಬೃಹತ್​​ ಮೊತ್ತದ ವೋಟ್​​ಗಳು ಬಂದಿರಬಹುದೆಂದು ಜನ ಊಹಿಸುತ್ತಿದ್ದಾರೆ. ಸಂಗೀತಾ ಪ್ರತಾಪ್​ ನಡುವೆ ದೊಡ್ಡ ಪೈಪೋಟಿಯೇ ಇದೆ. ಹಾಗಾಗಿಯೇ ಇವರಿಬ್ಬರ ನಡುವೆಯೇ ಯಾರಾದರೂ ಗೆಲ್ಲಬಹುದು ಎಂಬ ಅಭಿಪ್ರಾಯ ಸಾಕಷ್ಟು ಮಂದಿಯದ್ದು.

    ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮನೆಯವರು ಬಂದು ಅವರನ್ನು ಭೇಟಿ ಮಾಡಿ ಹೋಗಿದ್ದಾರೆ. ತುಕಾಲಿ ಸಂತೋಷ್ ಪತ್ನಿ, ನಮೃತಾ ತಾಯಿ, ಸಿರಿ ಮನೆಯವರು, ಸಂಗೀತಾ ಮನೆಯವರು ಸೇರಿದಂತೆ ಸ್ಪರ್ಧಿಗಳ ಮನೆಯಿಂದ ಮನೆಮಂದಿ ಬಂದು ಹೋಗಿದ್ದಾರೆ.

    ಇನ್ನು ಸಂಗೀತಾ ಶೃಂಗೇರಿಯವರು ತನ್ನ ಕನಸಿನ ಹುಡುಗ ಹೇಗಿರಬೇಕೆಂದು ಹೇಳಿದ್ದಾರೆ. ಆ ವೇಳೆ ಕಾರ್ತಿಕ್ ಮಹೇಶ್ ಅವರು ಕೂಡ ಬಂದು ನಾನು ಸ್ವಲ್ಪ ಕೇಳ್ತೀನಿ ಎಂದು ಅಲ್ಲೇ ಕುಳಿತಿದ್ದಾರೆ.

    ಸಂಗೀತಾ ಅವರ ಬಳಿ ನಿಮ್ಮನ್ನು ಮದುವೆಯಾಗೋ ಹುಡುಗ ಹೇಗಿರಬೇಕೆಂದು ಕೇಳಿದಾಗ, ಸಂಗೀತಾ, ನಾನು ಮದುವೆಯಾಗೋ ಹುಡುಗ ನನ್ನನ್ನ ಸರಿಯಾಗಿ ಅರ್ಥ ಮಾಡ್ಕೋಬೇಕು, ಮ್ಯೂಸಿಕ್ ಬಗ್ಗೆ ಟೇಸ್ಟ್​ ಇರ್ಬೇಕು, ಗುಡ್​ ಡ್ಯಾನ್ಸರ್ ಆಗಿರ್ಬೇಕು, ಆಗಾಗ ಜಗಳ ಮಾಡೋದು ಸಹಜ ಆದ್ರೆ ಅರ್ಥ ಮಾಡ್ಕೊಳ್ಬೇಕು ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts