

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಆರಂಭವಾಗಿ 14 ವಾರಗಳಾಗಿದ್ದು, ಶೋ ಒಂದಲ್ಲ ಒಂದು ಕಾರಣಕ್ಕೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಫ್ಯಾಮಿಲಿ ರೌಂಡ್ನಲ್ಲಿ ಸ್ಫರ್ಧಿಗಳ ಕುಟುಂಬಸ್ಥರು ಮನೆಗೆ ಬಂದು ಎಂಜಾಯ್ ಮಾಡಿದ್ದು, ಇದರ ನಡುವೆಯೇ ಸ್ಫರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದೆ. ಸದ್ಯ ಬಿಡುಗಡೆಯಾಗಿರುವ ಪ್ರೋಮೋ ಮಜಭರಿತವಾಗಿದ್ದು, ಸಖತ್ ವೈರಲ್ ಆಗುತ್ತಿದೆ.
ಮುತ್ತು ಮೇಲೊಂದು ಮುತ್ತು! ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಲಾಗಿರುವ ಪ್ರೋಮೋ (BiggBoss Promo) ನೋಡುವುದಾದರೆ ಕ್ಯಾಪ್ಟನ್ ಆಯ್ಕೆ ಸಂಬಂಧ ಸ್ಫರ್ಧಿಗಳಿಗೆ ಮುತ್ತಿನ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಸ್ಫರ್ಧಿಗಳಾದ ಹನುಮಂತು, ಧನರಾಜ್ ಮತ್ತು ಚೈತ್ರಾ ಕುಂದಾಪುರ ಭಾಗಿಯಾಗಿರುತ್ತಾರೆ. ಈ ವೇಳೆ ರಜತ್ ಆಡಿರುವ ಮಾತುಗಳು ಮನೆಮಂದಿಗೆ ಭರ್ಜರಿ ಮನರಂಜನೆ ನೀಡಿದೆ.
ಆ ಆಟ ಏನೆಂದರೆ ಮೂರು ಸ್ಪರ್ಧಿಗಳು ಕೈಯಲ್ಲಿ ಕೋಲು ಹಿಡಿದುಕೊಂಡು ಆ ಕೋಲಿನ ತುತ್ತ ತುದಿಗೆ ಇರುವ ಲಿಪ್‌ಸ್ಟಿಕ್‌ನಿಂದ ಎದುರಿರುವ ಮೂರು ಸ್ಪರ್ಧಿಗಳ ತುಟಿಗೆ ಹಚ್ಚಬೇಕು. ಹೀಗೆ ಲಿಪ್‌ಸ್ಟಿಕ್ ಹಚ್ಚಿಕೊಂಡ ಸ್ಪರ್ಧಿಗಳು ತಮಗೆ ನಿಗದಿಪಡಿಸಿದ ಬೋರ್ಡ್‌ಗಳಿಗೆ ಸರಿಯಾಗಿ ಕಾಣಿಸುವಂತೆ ಮುತ್ತು ಕೊಡಬೇಕು. ಹೀಗೆ ಯಾವ ಸ್ಪರ್ಧಿ ಬೋರ್ಡಿನ ಮೇಲೆ ಹೆಚ್ಚು ಮುತ್ತು ಕೊಡುತ್ತಾರೆ, ಯಾರ ಮುತ್ತು ಸ್ಪಷ್ಟವಾಗಿರುತ್ತದೆ ಅವರು ಗೆಲುವು ಸಾಧಿಸುತ್ತಾರೆ. ಈ ಟಾಸ್ಕ್ನ ಮತ್ತೊಂದು ವಿಶೇಷ ಏನೆಂದರೆ ಹನುಮಂತು ಹಾಗೂ ಚೈತ್ರಾ ತಮ್ಮ ಕುಟುಂಬದವರ ಎದುರೇ ಈ ಟಾಸ್ಕ್ ಆಡಿದ್ದು, ಮತ್ತಷ್ಟು ವಿಶೇಷವಾಗಿದೆ.
ಹನುಮಂತ ಕೊಟ್ಟ ಮುತ್ತಿಗೆ ರಜತ್ ಸಿಕ್ಕಾಪಟ್ಟೆ ಕಾಮಿಡಿ ಮಾಡಿದ್ದಾರೆ. ಹನುಮಂತ ಮುತ್ತು ಕೊಡುವಾಗ ಅಲ್ಲಿ ಯಾವುದಾದರೂ ಹುಡುಗಿ ನಿಂತಿದ್ದರೆ ನೀವು ಬೈತಿದ್ರಾ ಎಂದು ರಜತ್ ಅವರು ಹನುಮಂತ ಅವರ ತಾಯಿಗೆ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಹನುಮಂತ ಅವರ ತಾಯಿ ನಾನು ಅವನನ್ನು ಬೈಯೋದಿಲ್ಲ ಎಂದು ಹೇಳುತ್ತಾರೆ. ಆಗ ರಜತ್, ಮಗ ಅರಾಮಾಗಿ ಮುತ್ತು ಕೊಡ್ಲಿ ಅಂತ ಬಿಟ್ಟುಬಿಡ್ತಿದ್ರಾ? ಎಂದು ಕಾಮಿಡಿ ಮಾಡಿದ್ದಾರೆ. ಕೊಟ್ಟಿರುವ ಮುತ್ತಿನ ಮಾರ್ಕ್ ಸರಿಯಾಗಿ ಕಾಣಿಸುತ್ತಿಲ್ಲ ಎಂದು ರಜತ್ ಹೇಳಿದ್ದಕ್ಕೆ ಧನ್‌ರಾಜ್ ಕಾಮಿಡಿಯಾಗಿ ಉತ್ತರ ಕೊಟ್ಟಿದ್ದಾರೆ. ಮೂರು ತಿಂಗಳು ಆಯ್ತು ಹೀಗಾಗಿ ಪ್ರಾಕ್ಟಿಸ್ ತಪ್ಪಿ ಹೋಗಿದೆ ಎಂದು ಕಾಮಿಡಿ ಮಾಡಿದ್ದಾರೆ. ಇದಕ್ಕೆ ಮನೆ ಮಂದಿಯೆಲ್ಲಾ ಬಿದ್ದು ಬಿದ್ದು ನಗಾಡಿದ್ದಾರೆ. ಈ ಆಟದಲ್ಲಿ ತುಂಬಾ ಜನರಿಗೆ ಮುತ್ತು ಕೊಡಲು ಬರೋದಿಲ್ಲ ಅಂತ ಸ್ಪರ್ಧಿಗಳು ಕಾಮಿಡಿ ಮಾಡುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.
ಚೈತ್ರಾ ಕುಂದಾಪುರ ಅವರು ಅತಿಹೆಚ್ಚು ಮುತ್ತುಗಳನ್ನು ಕೊಟ್ಟು ವಿಜಯಶಾಲಿ ಆಗಿದ್ದಾರೆ. ಗಾಯಕ ಹನುಮಂತ ಅವರು ಹಾಗೂ ಮದುವೆಯಾಗಿರುವ ಧನರಾಜ್ ಆಚಾರ್ ಅವರು ನಂತರದ ಸ್ಥಾನಗಳಲ್ಲಿದ್ದಾರೆ . ಆದರೆ, ಈ ವೇಳೆ ರಜತ್ ಚೈತ್ರಾ ಅವರ ಕಾಲೆಳೆದಿದ್ದಾರೆ. ಇನ್ನು ಮದುಯೆಯಾಗದ ಚೈತ್ರಾ ಅವರು ಇಷ್ಟೊಂದು ಮುತ್ತು ಕೊಟ್ಟಿದ್ದನ್ನು ಇದೆಲ್ಲಾ ಟ್ಯಾಲೆಂಟ್ ಇದೆಯಾ ನಿಮ್ಮ ಬಳಿ ಎಂದು ಗೇಲಿ ಮಾಡಿದ್ದಾರೆ. ಸದ್ಯ ಈ ಪ್ರೋಮೋ ಸಖತ್ ವೈರಲ್ ಆಗಿದೆ.