ಆತ ವಿಶ್ರಾಂತಿ ಪಡೆದಿಲ್ಲ, ಬೇಕಂತಲೇ ಹೊರಗಿಟ್ಟಿದ್ದಾರೆ; Rohit Sharma ಕುರಿತು ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

Rohit Sharma
Published on

ಸಿಡ್ನಿ: ಪರ್ತ್​ನಲ್ಲಿ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ (Border Gavaskar Trophy Test Series) ಅಂತಿಮ ಪಂದ್ಯದಲ್ಲಿ ಭಾರತ ತಂಡ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, 185 ರನ್​ಗಳಿಗೆ ಆಲೌಟ್​ ಆಗಿದೆ. ಇನ್ನೂ ಟೆಸ್ಟ್​ ಸರಣಿಯ ಅಂತಿಮ ಪಂದ್ಯಕ್ಕೆ ರೋಹಿತ್​ ಶರ್ಮ (Rohit Sharma) ಬದಲು ಜಸ್ಪ್ರೀತ್​ ಬುಮ್ರಾ (Jasprit Bumrah) ತಂಡವನ್ನು ಮುನ್ನಡೆಸುತ್ತಿದ್ದು, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಲವರು ರೋಹಿತ್​ ಶರ್ಮ ಈ ಪಂದ್ಯದ ನಂತರ ನಿವೃತ್ತಿ ಘೋಷಿಸಬಹುದು ಎಂದು ಊಹಿಸಿದ್ದು, ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಆಟಗಾರರೊಬ್ಬರು ತಮ್ಮ ಹೇಳಿಕೆ ಮೂಲಕವೇ ಹೊಸ ಚರ್ಚೆಯನ್ನ ಹುಟ್ಟುಹಾಕಿದ್ದಾರೆ.

ರೋಹಿತ್ ಶರ್ಮ (Rohit Sharma) ಕೊನೆ ಪಂದ್ಯದಲ್ಲಿ ಆಡದಿರುವ ಬಗ್ಗೆ ಮಾತನಾಡಿರುವ ಮಾರ್ಕ್​ ಟೇಲರ್​, ಒಬ್ಬ ತಂಡದ ನಾಯಕನನ್ನು ಸರಣಿಯ ಬಹು ಮುಖ್ಯ ಪಂದ್ಯದಿಂದ ಹೊರಗುಳಿಯುತ್ತಾರೆ ಎಂದರೆ ಅದು ಬೇರೆ ಏನೋ ಇದೆ ಎಂದರ್ಥ. ಆತನನ್ನು ಬೇಕಂತಲೇ ತಂಡದಿಂದ ಕೈ ಬಿಡಲಾಗಿದೆ. ಆದರೂ ಈ ಬಗ್ಗೆ ಯಾರು ಹೇಳಿಲ್ಲ. ಆತ ಫಾರ್ಮ್​ನಲ್ಲಿದ ಕಾರಣ ಈ ಪಂದ್ಯ ತಪ್ಪಿಸಿಕೊಂಡಿದ್ದಾನೆ. ಕ್ರೀಡೆಯಲ್ಲಿ ಇದು ಸಹಜ ಪ್ರಕ್ರಿಯೆಯಾಗಿದೆ. ಆದರೆ, ನೀಡುತ್ತಿರುವ ಕಾರಣ ಸರಿಯಿಲ್ಲ ಎಂದು ಮಾರ್ಕ್​ ಟೇಲರ್​ ಹೇಳಿದ್ದಾರೆ.

ಟಾಸ್​ ವೇಳೆ ರೋಹಿತ್ ಶರ್ಮ (Rohit Sharma) ಪಂದ್ಯ ತಪ್ಪಿಸಿಕೊಳ್ಳುವ ಕುರಿತು ಮಾತನಾಡಿದ ನಾಯಕ ಜಸ್ಪ್ರೀತ್​ ಬುಮ್ರಾ (Jasprit Bumrah), ನಮ್ಮ ಕ್ಯಾಪ್ಟನ್​ ನಾಯಕತ್ವದ ಗುಣಗಳನ್ನು ತೋರಿಸಿದ್ದು, ಸ್ವತಃ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದರು. ಅನೇಕರು ಕಿಡಿಕಾರಿ ಮ್ಯಾನೇಜ್​ಮೆಂಟ್​ ನಿರ್ಧಾರವನ್ನು ಟೀಕಿಸಿದ್ದರು. ಮುಖ್ಯವಾಗಿ ಗೌತಮ್​ ಗಂಭೀರ್​ ವಿರುದ್ಧ ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದರು.

ಪಿತೃತ್ವದ ರಜೆ ಹಿನ್ನೆಲೆ ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯಕ್ಕೆ ರೋಹಿತ್​ ಶರ್ಮ (Rohit Sharma) ಗೈರಾಗಿದ್ದರು. ರೋಹಿತ್​ ಅನುಪಸ್ಥಿತಿಯಲ್ಲಿ ಜಸ್ಪ್ರೀತ್​ ಬುಮ್ರಾ (Jasprit Bumrah) ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಭಾರತ 295 ರನ್​ಗಳ ಭರ್ಜರಿ ಜಯ ಗಳಿಸಿತ್ತು. ಸರಣಿಯ ಎರಡನೇ ಪಂದ್ಯದಿಂದ ತಂಡವನ್ನು ಮುನ್ನಡೆಸಿದ ಹಿಟ್​ಮ್ಯಾನ್​ ಪ್ರಸ್ತುತ ಸರಣಿಯಲ್ಲಿ 31ರನ್​ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಸರಣಿಯ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ ತಂಡವಿದ್ದು, ಏನೆಲ್ಲಾ ಆಗಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net