

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಮುಗಿದು ತಿಂಗಳುಗಳಾಗಿದ್ದು, ಸದಾ ವಿವಾದಗಳಿಂದಲೇ ಸದ್ದು ಮಾಡಿದ ಆವೃತ್ತಿಯನ್ನು ನಟ ಕಾರ್ತಿಕ್ ಮಹೇಶ್ ಗೆದ್ದು ಬೀಗಿದರೆ ಡ್ರೋನ್ ಪ್ರತಾಪ್ ರನ್ನರ್ಅಪ್ ಆಗಿದ್ದರು. ಇದೀಗ ಬಿಗ್ಬಾಸ್ 11ನೇ ಆವೃತ್ತಿಯ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು, ಯಾವಾಗ ಆರಂಭವಾಗಲಿದೆ ಹಾಗೂ ಯಾರೆಲ್ಲ ಬಿಗ್ ಬಾಸ್ ಮನೆ ಸ್ಪರ್ಧಿಸಲಿದ್ದಾರೆ ಎನ್ನುವ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ 11ನೇ ಆವೃತ್ತಿಯ ಬಿಗ್ಬಾಸ್ ಶೋ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿದ್ದು, ಈ ಬಾರಿ ನಟ-ನಟಿಯರು, ಸೋಶಿಯಲ್ ಮೀಡಿಯಾ ಸ್ಟಾರ್ಸ್, ಬ್ಯುಸಿನೆಸ್ಮ್ಯಾನ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಸ್ಪರ್ಧಿಗಳಾಗಲಿದ್ದಾರೆ ಎಂದು ತಿಳಿದು ಬಂದಿದೆ. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.
ಹುಲಿ ಉಗುರು ಪ್ರಕರಣ, ಡ್ರೋನ್ ಪ್ರತಾಪ್, ವಿನಯ್ ಗೌಡ ಹಾಗೂ ಸ್ಪರ್ಧಿಗಳ ಮನಸ್ತಾಪದಿಂದಾಗಿ ಬಿಗ್ಬಾಸ್ ಸೀಸನ್ 10 ಹೆಚ್ಚು ಸುದ್ದಿ ಮಾಡಿತ್ತು. ಅದೇ ರೀತಿ ಈ ಬಾರಿ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ, ರಾಘವೇಂದ್ರ, ಸುನೀಲ್ ರಾವ್, ಮೋಕ್ಷಿತಾ ಪೈ, ಭವ್ಯ ಗೌಡ, ವರುಣ್ ಆರಾಧ್ಯ, ವರ್ಷಾ ಕಾವೇರಿ, ಭೂಮಿಕಾ ಬಸವರಾಜ್, ರೀಲ್ಸ್ ರೇಷ್ಮಾ ಸೇರಿದಂತೆ ಕೆಲವರ ಹೆಸರು ಮುನ್ನೆಲೆಗೆ ಬಂದಿದೆ. ಹೀಗಾಗಿ ಈ ಸೀಸನ್‌ನಲ್ಲಿ ಏನು ವಿಶೇಷತೆ ಇರಲಿದೆ ಎಂಬ ಕುತೂಹಲವಿದೆ.
2022ರಲ್ಲಿ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಪ್ರಸಾರ ಆಗಿತ್ತು. ಈ ಬಾರಿ ಬಿಗ್ ಬಾಸ್ ಒಟಿಟಿ ಇರೋದಿಲ್ವಂತೆ. ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದ ಬಗ್ಗೆ ಅಥವಾ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಬಗ್ಗೆಯೂ ವಾಹಿನಿ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಎಂದಿನಂತೆ ಕಿಚ್ಚ ಸುದೀಪ್ ಅವರು ಈ ಶೋ ನಿರೂಪಣೆ ಮಾಡಬಹುದು ಎಂಬ ನಿರೀಕ್ಷೆ ಇದೆ.