BiggBoss Kannada S10: ಯಾರು ಅವಕಾಶವಾದಿಗಳು?; ಮಧ್ಯರಾತ್ರಿ ನಡೆಯಿತು ಗ್ರೂಪಿಸಮ್ ಚರ್ಚೆ!

Untitled design - 2023-10-18T143209.164
Published on

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಹತ್ತನೇ ಸೀಸನ್‌ನ ವಾರಾಂತ್ಯದ ಮೊದಲ ವಾರದ ಪಂಚಾಯಿತಿ ಕಟ್ಟೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಟ, ನಿರೂಪಕ ಕಿಚ್ಚ ಸುದೀಪ್​ ಬಿಗ್​ ಮನೆಯ ಬಿಗ್​ ಸ್ಪರ್ಧಿಗಳಿಗೆ ತಮ್ಮ ಖಡಕ್ ಮಾತಲ್ಲೇ ಅವರವರ ತಪ್ಪುಗಳನ್ನು ಅರ್ಥೈಸಿ, ಆಟವನ್ನು ಅದ್ಬುತವಾಗಿ ಆಡಿದವರಿಗೆ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದರು. ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳಲ್ಲಿ ಗ್ರೂಪಿಸಮ್ ಎಂಬ​ ಚರ್ಚೆ ತೀವ್ರವಾಗಿ ಬುಗಿಲೆದ್ದಿದೆ.

ಎರಡನೇ ವಾರದ ಮೊದಲ ದಿನವೇ ಟಾಸ್ಕ್​ ಕೊಟ್ಟ ಬಿಗ್​ ಬಾಸ್​ ಮನೆಯ ಒಟ್ಟು ಸದಸ್ಯರನ್ನು ಎರಡು ತಂಡಗಳನ್ನಾಗಿ ರೂಪಿಸಿದರು. 'ರಣಶಕ್ತಿ' ತಂಡಕ್ಕೆ ಕಾರ್ತಿಕ್​ ನಾಯಕನಾದರೆ, 'ಮಾಣಿಕ್ಯ' ತಂಡಕ್ಕೆ ವಿನಯ್ ಕ್ಯಾಪ್ಟನ್​ ಆಗಿ ಆಟವಾಡಿದರು.

ಇಬ್ಬರ ನಾಯಕರ ನೇತೃತ್ವದಲ್ಲಿ ಟಾಸ್ಕ್ ಅಂತ್ಯಗೊಂಡರು ಸ್ಪರ್ಧಿಗಳ ನಡುವೆ ಮೂಡಿದ್ದ ಮನಸ್ತಾಪಗಳು ಮುಗಿಯಲಿಲ್ಲ. ಈ ಬಗ್ಗೆ ಮಧ್ಯರಾತ್ರಿ ಮನೆಯ ಹಾಲ್​ನಲ್ಲಿ ಮಲಗಿಕೊಂಡು ಚರ್ಚೆ ಪ್ರಾರಂಭಿಸಿದ ಡ್ರೋನ್​ ಪ್ರತಾಪ್​ ಮತ್ತು ತನಿಷಾ ಗ್ರೂಪಿಸಮ್​ ಮಾಡುತ್ತಿರುವವರು ಯಾರು ಎಂದು ತಮ್ಮಲ್ಲೇ ಗುಸುಗುಸು ಮಾತನಾಡಿಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯ ಸದಸ್ಯರು ಗುಂಪುಗಳಲ್ಲಿ ಒಡೆದುಹೋಗಿದೆ, ಟಾಸ್ಕ್‌ಗಳನ್ನೂ ಈ ಗುಂಪುಗಳಾಗಿಯೇ ಎದುರಿಸುತ್ತಿದ್ದಾರೆ. ಈ ಗುಂಪುಗಾರಿಕೆ ಹುಟ್ಟಿಕೊಂಡಿದ್ದು ಎಲ್ಲಿಂದ? ಇದಕ್ಕೆ ಕಾರಣರಾದವರು ಯಾರು? ಯಾರ ಗಮನಕ್ಕೂ ಬಾರದಂತೆ ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಸ್ವಿಚ್ ಆಗುತ್ತಿರುವವರು ಯಾರು ಎಂಬ ಹಲವು ಪ್ರಶ್ನೆಗಳು ಇಬ್ಬರ ನಡುವೆ ಚರ್ಚೆಯಾಗಿದೆ.

ನಡುರಾತ್ರಿಯ ವೇಳೆ ಈ ವಿಷಯ ಕುರಿತು ಚರ್ಚೆಗಿಳಿದ ಡ್ರೋಣ್ ಪ್ರತಾಪ್‌ ಮತ್ತು ತನಿಷಾ ಕುಪ್ಪಂಡ ತಮ್ಮ ಪ್ರಕಾರ ಯಾರು ಜೆನ್ಯೂನ್ ಇದ್ದಾರೆ, ಯಾರು ಅವಕಾಶವಾದಿಗಳು? ಇದು ಮುಂದಿನ ದಿನಗಳಲ್ಲಿ ಹೇಗೆ ಪರಿಣಾಮ ಬೀರಲಿದೆ ಎಂಬ ವಿಷಯವನ್ನು ತಮ್ಮಲ್ಲೇ ಆಳವಾಗಿ ಮಾತನಾಡಿಕೊಂಡಿದ್ದಾರೆ. ಇಬ್ಬರು ಯಾರ ಹೆಸರನ್ನು ಉಲ್ಲೇಖಿಸಿದ್ದಾರೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ವೀಕ್ಷಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net