More

    ಭಾರತ ಇವಿಯಲ್ಲೂ ವಿಶ್ವಗುರು: 2030ಕ್ಕೆ ವಾರ್ಷಿಕ 1.6 ಕೋಟಿ ಎಲೆಕ್ಟ್ರಿಕ್ ವಾಹನ ಮಾರಾಟ

    ನವದೆಹಲಿ: ಭಾರತದಲ್ಲಿ 2030ರ ವೇಳೆಗೆ ವಾರ್ಷಿಕ 1.6 ಕೋಟಿ ಎಲೆಕ್ಟ್ರಿಕ್ ವಾಹನಗಳು (ಇವಿಗಳು)ರಸ್ತೆಗೆ ಇಳಿಯಲಿವೆ. ಅಂದರೆ ಒಟ್ಟಾರೆ ವಾಹನಗಳಿಗೆ ಹೋಲಿಸಿದರೆ ಶೇ.45.5ರಷ್ಟು ಇವಿಗಳು ಸಾರಿಗೆ ವ್ಯವಸ್ಥೆಗೆ ಸೇರಿಕೊಳ್ಳಲಿದ್ದು, ಇವುಗಳ ಸಂಖ್ಯೆ 1,39,36,691 ಆಗಲಿದೆ.

    ಇದನ್ನೂ ಓದಿ: ಮೂಲಸೌಕರ್ಯಕ್ಕೆ 143 ಲಕ್ಷ ಕೋಟಿ ರೂ. ಖರ್ಚು ಮಾಡಲಿದೆ ಭಾರತ: ರೇಟಿಂಗ್ ಏಜೆನ್ಸಿ ಕ್ರಿಸಿಲ್ ಅಭಿಮತ

    ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಭವಿಷ್ಯವು ವಿದ್ಯುತ್ ಆಗಿದೆ. ಭಾರತವು ಈಗಾಗಲೇ ಎಲೆಕ್ಟ್ರಿಕ್ ವಾಹನಗಳಿಗೆ ಹೊಂದಿಕೊಳ್ಳುವ ಮತ್ತು ಅವುಗಳನ್ನು ಅಧಿಕ ಪ್ರಮಾಣದಲ್ಲಿ ತಯಾರಿಸುವ ಹಾದಿಯಲ್ಲಿದೆ. ಸಾರಿಗೆ ವಲಯದಿಂದ ಪರಿಸರ ಮಾಲಿನ್ಯ ಹಾಳಾಗದಂತೆ ಮಾಡಲು ಮತ್ತು ಇದಕ್ಕೆ ಪೂರಕವಾಗಿ ಇಂಗಾಲದ ಡೈ ಆಕ್ಸೈಡ್​ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಕ್ರಿಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ, 2005 ರಿಂದ 2019 ರ ನಡುವೆ ಕಾರ್ಬನ್ ಹೊರಸೂಸುವಿಕೆಯ ತೀವ್ರತೆಯನ್ನು ಶೇ.33 ರಷ್ಟು ಕಡಿಮೆಯಾಗುವಂತೆ ಮಾಡಿದ್ದೇವೆ. ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವು 2030 ರ ವೇಳೆಗೆ ಈಗಿನದಕ್ಕಿಂತ ಶೇ.50 ಉತ್ಪಾದನೆ ಗುರಿಯನ್ನು ಮೀರಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

    ಭಾರತವು 2023 ರಲ್ಲಿ ಅಂದಾಜು 5.18 ಮಿಲಿಯನ್ ಟನ್ ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸಿದೆ. ಎಲೆಕ್ಟ್ರಿಕ್ ವಾಹನಗಳ ಅವಲಂಬನೆ ಮತ್ತು ಪರಿಸರದ ದೃಷ್ಟಿಕೋನದಿಂದ ವಿದ್ಯುತ್​ ಬಅವಲಂಬನೆ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯು ರಸ್ತೆಗಳಲ್ಲಿ ಬೆಳೆಯುತ್ತಿದ್ದಂತೆ ಹವಾಮಾನ ಬದಲಾವಣೆಯಲ್ಲಿ ಭಾರತವು ನಾಯಕನಾಗಿ ಹೊರಹೊಮ್ಮುವುದನ್ನು ನಾವು ನೋಡುತ್ತೇವೆ. ಎಲೆಕ್ಟ್ರಿಕ್ ವಾಹನಗಳನ್ನು ಮುಖ್ಯವಾಹಿನಿಗೆ ತರುವ ಇನ್ನೊಂದು ಪ್ರಮುಖ ಹೆಜ್ಜೆಯೆಂದರೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ವಿಸ್ತರಿಸುವುದು, ದೇಶದಲ್ಲಿ ಪ್ರಸ್ತುತ 10,000 ಇದ್ದು, ಮಹಾರಾಷ್ಟ್ರ (2531) ಮತ್ತು ದೆಹಲಿ (1815) ಹೆಚ್ಚಿನ ಸಂಖ್ಯೆಯಲ್ಲಿವೆ. ಮುಂದೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುವ ಮುನ್ಸೂಚನೆ ಇದೆ ಎಂದು ಅವರು ಹೇಳಿದರು.

    ಇನ್ನು ಹೊಸ ‘ಇವಿ-ರೆಡಿ ಇಂಡಿಯಾ ಡ್ಯಾಶ್‌ಬೋರ್ಡ್ ಅನ್ನು OMI ಫೌಂಡೇಶನ್ ಅಭಿವೃದ್ಧಿಪಡಿಸಿದೆ, ಮಾಹಿತಿ ಪ್ರಕಾರ ತಮಿಳುನಾಡು ದೇಶದ E-2W ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತದೆ, E-3W ಉತ್ಪಾದನೆಯಲ್ಲಿ ತೆಲಂಗಾಣ, E-4W ತಯಾರಿಕೆಯಲ್ಲಿ ಮಹಾರಾಷ್ಟ್ರ, ಬ್ಯಾಟರಿ ತಯಾರಿಕೆಯಲ್ಲಿ ಗುಜರಾತ್ ಮತ್ತು Rಮತ್ತು D ನಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಅವರು ವಿವರಿಸಿದರು.

    ಇಂಧನ ಕೊರತೆಯಿಂದಾಗಿ 48 ವಿಮಾನಗಳ ಹಾರಾಟ ರದ್ದು ಮಾಡಿದ ಪಾಕಿಸ್ತಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts