ಬೆಂಗಳೂರು: ಬಿಗ್ಬಾಸ್ ಸೀಸನ್ 11 ( Bigg Boss Kannada 11 ) ಕ್ಕೆ ದಿನಗಣನೆ ಆರಂಭವಾಗಿದೆ. ಸೆ. 29ರಿಂದ ಬಿಗ್ಬಾಸ್ ಸೀಸನ್ 11 ಆರಂಭವಾಗಲಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್ ( Kichcha Sudeepa ) ಅವರೇ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಯಶಸ್ವಿ 10 ಆವೃತ್ತಿಯನ್ನು ಮುಗಿಸಿರುವ ಬಿಗ್ಬಾಸ್ ಶೋ 11ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ಬಾರಿ ಸಮ್ಥಿಂಗ್ ಸ್ಪೆಷಲ್ ಸಹ ಇರಲಿದ್ದು, ಇದು ಹೊಸ ಅಧ್ಯಾಯ ಎಂದು ಹೇಳಿರುವುದರಿಂದ ಈ ಶೋ ಮೇಲೆ ಹೆಚ್ಚು ನಿರೀಕ್ಷೆ ಇದೆ.
ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ಗೆ ಇನ್ನೂ 3 ದಿನ ಮಾತ್ರ ಬಾಕಿ ಇರುವಾಗ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಬಿಡುಗಡೆ ಮಾಡಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ಪ್ರೋಮೋದಲ್ಲಿ ಕೆಲವೊಂದಿಷ್ಟು ಫೋಟೋಗಳು ರಫ್ ಅಂತಾ ಬಂದು ಹೋಗುತ್ತವೆ. ಆ ಫೋಟೋಗಳು ಸ್ಪರ್ಧಿಗಳದ್ದೇ ಎನ್ನಲಾಗುತ್ತಿದೆ. ಫೋಟೋ ಸ್ವಲ್ಪ ಮಸುಕಾಗಿದ್ದು, ಅದನ್ನು ನೋಡಿ ವೀಕ್ಷಕರು ಸ್ಪರ್ಧಿಗಳು ಯಾರಿರಬಹುದು ಎಂದು ಊಹಿಸುತ್ತಿದ್ದಾರೆ.
ಇದನ್ನೂ ಓದಿ: ನಿಮ್ಮನ್ನು ಬಿಟ್ಟರೆ ಯಾರು ಬಿಗ್ಬಾಸ್ ನಿರೂಪಣೆ ಮಾಡಬಹುದು? ಸುದೀಪ್ ಕೊಟ್ಟ ಖಡಕ್ ಉತ್ತರ ಹೀಗಿತ್ತು…
ಇವ್ರೇ ಬಿಗ್ ಬಾಸ್ 11 ರ ಸ್ಪರ್ಧಿಗಳು
Guess who ?#BBK11 #bbk #KicchaBOSS #KicchaSudeep pic.twitter.com/nFPvyUPXGt— Mahi Kiccha (@Mahi_Kiccha21) September 25, 2024
ಫೋಟೋಗಳನ್ನು ನೋಡಿ ನಟ ಕಿರಣ್ ರಾಜ್, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಭೂಮಿಕಾ ಬಸವರಾಜ್, ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್, ನಟಿಯರಾದ ಹರಿಪ್ರಿಯ, ನಭಾ ನಟೇಶ್ ಮತ್ತು ಭಾವನಾ ಮೆನನ್ ಇರಬಹುದೆಂದು ಊಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆದರೆ, ಆ ಫೋಟೋದಲ್ಲಿರುವುದು ಅವರೇನಾ? ಅಥವಾ ಬೇರೆಯವರಾ? ಎಂದು ತಿಳಿಯಲು ಶನಿವಾರದವರೆಗೆ ಕಾಯಬೇಕಿದೆ. ಏಕೆಂದರೆ, ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ ವೇಳೆ ಐವರು ಸ್ಪರ್ಧಿಗಳ ಹೆಸರನ್ನು ಕಲರ್ಸ್ ಕನ್ನಡ ವಾಹಿನಿ ಮೊದಲೇ ಘೋಷಣೆ ಮಾಡಲಿದೆ.
According To my Brotherman @ikhiladiiX 🥂
Let's see on Saturday which one is correct !? #BBK11 #bbk #KicchaSudeep
#BiggBossKannada11 https://t.co/apcBZ2391v pic.twitter.com/PB0NYGjxZY— Mahi Kiccha (@Mahi_Kiccha21) September 25, 2024
ಸೆ.23ರಂದು ಕಲರ್ಸ್ ಕನ್ನಡ ವಾಹಿನಿ ವತಿಯಿಂದ ಬಿಗ್ಬಾಸ್ ಸೀಸನ್ 11ರ ಕುರಿತು ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪ್ರಶಾಂತ್ ನಾಯಕ್, ಶೋ ಆರಂಭಕ್ಕೂ ಮುನ್ನವೇ ಈ ಬಾರಿ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದರು. ಸಾಮಾನ್ಯವಾಗಿ ಸ್ಪರ್ಧಿಗಳ ಸುಳಿವನ್ನು ಮೊದಲೇ ಬಿಟ್ಟುಕೊಡುವುದಿಲ್ಲ. ಏಕೆಂದರೆ, ಇದನ್ನು ಜನರ ಕುತೂಹಲಕ್ಕೆ ಬಿಡಲಾಗುತ್ತದೆ. ಇದೇ ಕುತೂಹಲ ಕಾರಣದಿಂದಾಗಿ ಬಿಗ್ಬಾಸ್ ಆರಂಭದ ಎಪಿಸೋಡ್ಗಾಗಿ ಜನರು ಕಾಯುತ್ತಾರೆ. ಅಂದು ಯಾರೆಲ್ಲ ಮನೆಯ ಒಳಗೆ ಹೋಗುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಟಿವಿ ಮುಂದೆ ಕುಳಿತಿರುತ್ತಾರೆ. ಆ ಎಪಿಸೋಡ್ಗೆ ಒಳ್ಳೆಯ ಟಿಆರ್ಪಿ ಕೂಡ ಬರುತ್ತದೆ. ಆದರೆ, ಈ ಬಾರಿ ಮೊದಲೇ ಸ್ಪರ್ಧಿಗಳನ್ನು ಘೋಷಣೆ ಮಾಡುವುದಾಗಿ ಕಲರ್ಸ್ ಕನ್ನಡ ವಾಹಿನಿ ಹೇಳಿದೆ.
ಈ ಬಾರಿಯ ಶೋನಲ್ಲಿ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆ ಇರಲಿದೆ. ಇದೇ ಈ ಬಾರಿಯ ಹೊಸತನ. ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೋ ಅಥವಾ ನರಕಕ್ಕೆ ಹೋಗಬೇಕೋ ಎಂಬುದನ್ನು ನಿರ್ಧರಿಸಲು ವೀಕ್ಷಕರು ಮತ ಚಲಾಯಿಸಬಹುದು ಎಂದು ಪ್ರಶಾಂತ್ ನಾಯಕ್ ತಿಳಿಸಿದರು.
ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ರೋಮೋ ಕೂಡ ಸ್ವರ್ಗ ಮತ್ತು ನರಕದ ಥೀಮ್ನಲ್ಲಿ ಶೂಟ್ ಮಾಡಲಾಗಿದೆ. ಈ ಬಾರಿ ಬಿಗ್ಬಾಸ್ನಲ್ಲಿ ಎರಡು ಮನೆ ಇರಲಿದೆ. ಒಂದು ಮನೆಯನ್ನು ನರಕದಂತೆ ಮತ್ತು ಇನ್ನೊಂದು ಮನೆಯನ್ನು ಸ್ವರ್ಗದಂತೆ ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ. ಸ್ವರ್ಗದ ಮನೆಯಲ್ಲಿ ಇರುವವರು ಬಿಗ್ಬಾಸ್ ಮನೆಯ ಎಲ್ಲಾ ಸೌಕರ್ಯಗಳನ್ನು ಬಳಸಲಿದ್ದಾರೆ ಮತ್ತು ಅನುಭವಿಸಲಿದ್ದಾರೆ. ನರಕದ ಮನೆಯಲ್ಲಿರುವವರಿಗೆ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ ಎನ್ನಲಾಗಿದೆ. ಈ ಎರಡು ಮನೆಯಲ್ಲಿ ಇರುವವರು ಯಾವಾಗಬೇಕಾದರೂ ಅದಲು-ಬದಲಾಗಬಹುದು. ಅದು ಬಿಗ್ಬಾಸ್ ನೀಡುವ ಟಾಸ್ಕ್ ಆಧಾರದ ಮೇಲಿರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಒಂದಲ್ಲ ಎರಡು… ಇದೇನಾದ್ರೂ ನಿಜವಾದ್ರೆ ಈ ಬಾರಿಯ ಬಿಗ್ಬಾಸ್ ಮತ್ತಷ್ಟು ರೋಚಕವಾಗಿರಲಿದೆ!
ಸ್ವರ್ಗ ಮತ್ತು ನರಕದ ಪರಿಕಲ್ಪನೆಯಲ್ಲಿ ಎರಡು ಮನೆ ಇದ್ದರೆ ಈ ಬಾರಿಯ ಶೋ ಇನ್ನಷ್ಟು ರೋಚಕವಾಗಿರಲಿದೆ. ಇದಕ್ಕೆಲ್ಲ ಉತ್ತರ ಸಿಗಬೇಕೆಂದರೆ ಬಿಗ್ಬಾಸ್ ಶೋ ಆರಂಭವಾಗಬೇಕಿದೆ. ಅದು ತುಂಬಾ ದೂರವೇನಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಶೋ ಆರಂಭವಾಗಲಿದ್ದು, ಮತ್ತೆ ಮೂರು ತಿಂಗಳ ಕಾಲ ಬಿಗ್ಬಾಸ್ ಮನರಂಜನೆ ಸಿಗಲಿದೆ.
ನಾವು ಐವರು ನಿನ್ನನ್ನು ಹಂಚಿಕೊಳ್ತೇವೆ ಕರೆದಾಗ ಬರ್ತೀಯಾ? ಕನ್ನಡದ ಸ್ಟಾರ್ ನಟಿಯ ಸ್ಫೋಟಕ ಹೇಳಿಕೆ | Kannada Actress
ಪ್ಲೀಸ್ ನನ್ನ ವಿಡಿಯೋ ಮಾತ್ರ ಬಳಸಬೇಡಿ… ಪರಿಪರಿಯಾಗಿ ಬೇಡಿಕೊಂಡ ನಟಿ ರಶ್ಮಿ ಗೌತಮ್! Rashmi Gautham