More

    ಬಿಗ್​ಬಾಸ್​ ಮನೆಯ ಸೀಕ್ರೆಟ್​ ರಿವೀಲ್​ ಮಾಡಿದ ಮೈಕಲ್​! ಫೈನಲ್​ಗೆ ಹೋಗೋದು ಈ ಸ್ಪರ್ಧಿಗಳಂತೆ

    ಬೆಂಗಳೂರು: ಮನರಂಜನೆ, ಕ್ರೀಡೆ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಖ್ಯಾತರಾದ ಮತ್ತು ವಿವಾದಕ್ಕೆ ಗುರಿಯಾದ ವ್ಯಕ್ತಿಗಳನ್ನು ಬಿಗ್​ಬಾಸ್​ ಆಯೋಜಕರು ಆಯ್ಕೆ ಮಾಡಿ, ಬಿಗ್​ಬಾಸ್​ ಮನೆಯೊಳಗೆ ಕಳುಹಿಸುತ್ತಾರೆ. ಮನೆಗೆ ಎಂಟ್ರಿ ಕೊಡುವ ಮುನ್ನ ತಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್​ ಮಾಡಿ ಅದ್ಧೂರಿಯಾಗಿ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬುದು ನಮಗೆ ಮತ್ತು ನಿಮಗೆ ಗೊತ್ತಿರುವ ಸಂಗತಿ.

    ಆದರೆ, ಯಾರಿಗೂ ತಿಳಿಯದ ಸಂಗತಿ ಮನೆಯೊಳಗೆ ಪ್ರವೇಶ ನೀಡಿ ಹೊರಬಂದ ಸ್ಪರ್ಧಿಗಳಿಗೆ ಮಾತ್ರ ಗೊತ್ತಿರುತ್ತದೆ. ಅದರಲ್ಲಿ ಒಂದು ಕುತೂಹಲಕಾರಿ ಸಂಗತಿಯನ್ನು ಕಳೆದ ವಾರವಷ್ಟೇ ನಾಮಿನೇಟ್​ ಆಗಿ ಹೊರಬಂದಿರುವ ಮೈಕಲ್​ ಅಜಯ್​​ ಅವರು ಬಹಿರಂಗಪಡಿಸಿದ್ದಾರೆ.

    ವಿಜಯವಾಣಿ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಮೈಕೆಲ್​, ಬಿಗ್​ಬಾಸ್​ ಮನೆಯ ಒಳಗೆ ಸ್ಮೋಕಿಂಗ್​ ಝೋನ್​ ಇದೆ. ಆದರೆ, ರೂಲ್ಸ್​ ಬ್ರೇಕ್​ ಆದ ಬಳಿಕ ಎರಡನೇ ವಾರದಲ್ಲಿ ಝೋನ್​ ಲಾಕ್​ ಆಯ್ತು. ಬಳಿಕ ಓಪನ್​ ಮಾಡಲೇ ಇಲ್ಲ. ಪ್ರತಿ ದಿನ ಐದು ಸಿಗರೇಟ್​ಗಳನ್ನು ಕೊಡುತ್ತಿದ್ದರು. ಆದರೆ, ಬಿಗ್​ಬಾಸ್​ ರೂಲ್ಸ್​ ಬ್ರೇಕ್​ ಮಾಡಿದ ಮೇಲೆ ಮತ್ತೆ ಸಿಗರೇಟ್​ ಕೊಡಲೇ ಇಲ್ಲ ಎಂದು ಮೈಕಲ್​ ಹೇಳಿದರು.

    ಬಿಗ್​ಬಾಸ್​ ಮನೆಯಲ್ಲಿ ವಿನಯ್​, ಕಾರ್ತಿಕ್​, ಸಂಗೀತಾ, ಪ್ರತಾಪ್​ ಮತ್ತು ವರ್ತೂರು ಸಂತೋಷ್​ ಟಾಪ್​ ಫೈನ್​ ಫೈನಲಿಸ್ಟ್​ ಆಗುತ್ತಾರೆ ಎಂದರು. ಇದೇ ಸಂದರ್ಭದಲ್ಲಿ ತನಿಷಾ ಬಗ್ಗೆ ಮಾತನಾಡಿದ ಅವರು ಜೋರಾಗಿ ಕೂಗಾಡುವುದೇ ತನಿಷಾ ಅವರ ಸ್ವಭಾವ. ಅದರ ಬಗ್ಗೆ ಅವರಿಗೂ ಹೆಮ್ಮೆ ಇದೆ. ಆರಂಭದಿಂದ ನನಗೂ ತನಿಷಾಗೂ ಅಷ್ಟೊಂದು ಮಾತುಕತೆ ಇರಲಿಲ್ಲ. ಆದರೆ, ಕೊನೆಯಲ್ಲಿ ಕೆಲವೊಂದಿಷ್ಟು ಸಂಘರ್ಷಗಳಾದವು ಎಂದು ಮೈಕಲ್​ ಹೇಳಿದರು.

    ಬಿಗ್​ಬಾಸ್​ ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ. ವಿನಯ್​ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್, ಡ್ರೋನ್​ ಪ್ರತಾಪ್​, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​ ಹಾಗೂ ನಮ್ರತಾ ಗೌಡ ಯಾರು ಟಾಪ್​ ಐದು ಸ್ಫರ್ಧಿಗಳಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.

    Video| ಬಿಗ್​​​ಬಾಸ್​​​ನಲ್ಲಿ ವೋಟಿಂಗ್​ ಫೇಕ್-ರಿಯಲ್​​?; ಮೈಕಲ್ ಶಾಕಿಂಗ್​ ಹೇಳಿಕೆ

    ಬಿಗ್​ಬಾಸ್​ ಮನೆ ಪ್ರವೇಶಕ್ಕೂ ಮುನ್ನ ಈ ಒಂದು ಟೆಸ್ಟ್​ ಕಡ್ಡಾಯ: ನೋ ಅಂದವರಿಗೆ ಬಾಗಿಲು ಬಂದ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts