More

    ಗಂಡು ಅಥವಾ ಹೆಣ್ಣು ಕೈದಿಗಳ ಸೆಲ್​ಗೆ ಹಾಕೋದಾ? ಪಾಷಾ ಹೇಳಿಕೆ ಕೇಳಿ ಅಧಿಕಾರಿಗಳು ಶಾಕ್​!

    ಬೆಂಗಳೂರು: ಮಾದಕ ವಸ್ತು ಜಾಲದ ನಂಟಿನ ಹಿನ್ನೆಲೆಯಲ್ಲಿ ಬಿಗ್​ಬಾಸ್​ ಖ್ಯಾತಿಯ ಆ್ಯಡಮ್​ ಪಾಷಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪಾಷಾರನ್ನು ನ್ಯಾಯಾಂಗ ಬಂಧನಕ್ಕೆ ಕರೆದೊಯ್ದಾಗ ಭಾರಿ ಹೈಡ್ರಾಮ ನಡೆದಿದೆ.

    ಜೈಲಿನಲ್ಲಿ ಆರೋಪಿ ಪಾಷಾನನ್ನು ಯಾವ ಸೆಲ್​ಗೆ ಹಾಕಬೇಕೆಂಬ ಗೊಂದಲದ ಜತೆಗೆ ಭಾರಿ ಚರ್ಚೆಯಾಗಿದೆ. ಈ ವೇಳೆ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ, ಯುವತಿಯರ ವಸ್ತ್ರಗಳನ್ನು ಧರಿಸುತ್ತೇನಷ್ಟೆ, ಕಾರಣ ನಾನೊಬ್ಬ ಡ್ರ್ಯಾಗ್ ಕ್ವೀನ್ ಎಂದು ಪಾಷಾ ವಾದಾ ಮಾಡಿದ್ದಾರೆ.

    ಇದನ್ನೂ ಓದಿ: ಕೆಲಸಕ್ಕೆ ಅಡ್ಡಿಬಂತು ‘ನಿಯಮ ಉಲ್ಲಂಘನೆ’ ಗಡ್ಡ: ಸಬ್ ಇನ್ಸ್‌ಪೆಕ್ಟರ್ ಅಮಾನತು

    ಆದರೆ, ಪಾಷಾರನ್ನು ಗಂಡು ಕೈದಿಗಳ ಸೆಲ್​ಗೆ ಹಾಕೋದಾ? ಅಥವಾ ಹೆಣ್ಣು ಕೈದಿಗಳ ಸೆಲ್​ಗೆ ಹಾಕೋದಾ? ಎಂದು ಜೈಲಾಧಿಕಾರಿಗಳು ಕೆಲ ಕಾಲ ಗೊಂದಲಕ್ಕೀಡಾಗಿದ್ದರು. ಮಂಗಳಮುಖಿಯರ ಸೆಲ್​ಗೆ ಹಾಕೋದು ಕೂಡ ಕಷ್ಟವಾಗಿದೆ. ಆ್ಯಡಮ್ ಪಾಷಾ ನಾನು ಮಂಗಳಮುಖಿಯಲ್ಲ ಎಂದು ಹೇಳಿದ್ದಾನೆ.

    ಕೊನೆಗೆ ಆ್ಯಡಮ್ ಪಾಷಾನನ್ನು ಪ್ರತ್ಯೇಕ ಸೆಲ್​ನಲ್ಲಿ ಇರಿಸಿರುವುದಾಗಿ ಪರಪ್ಪನ ಅಗ್ರಹಾರ ಜೈಲು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

    ನಟಿಗೆ ಮರ್ಮಾಂಗ ಫೋಟೋ ಶೇರ್​ ಮಾಡಿದ ಕಿರಾತಕ: ಅಶ್ಲೀಲ ಫೋಟೋ ಟ್ವೀಟ್​ ಮಾಡಿ ಕಲಾವಿದೆಯ ದೂರು! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts